ಹೈದ್ರಾಬಾದ್ ಗೆ ಹೋದ ‘ಕೈ’-‘ತೆನೆ’ ಶಾಸಕರು ವಿಮಾನದಲ್ಲಿ ವಾಪಸ್
ನೂತನ ಸಿಎಂ ಆಗಿ ಅಧಿಕಾರ ಸ್ವೀಕರಿಸಿರುವ ಯಡಿಯೂರಪ್ಪನವರಿಗೆ ನಾಳೆ ಅಗ್ನಿ ಪರೀಕ್ಷೆ. ಮೂರನೇ ಬಾರಿ ಸಿಎಂ ಆಗಿರುವ ಯಡಿಯೂರಪ್ಪ ಖುರ್ಚಿ ಗಟ್ಟಿಯಾಗಿರುತ್ತಾ ಎಂಬ ಪ್ರಶ್ನೆಗೆ ನಾಳೆ ಉತ್ತರ ಸಿಗಲಿದೆ. ಈ ಮಧ್ಯೆ ಆಪರೇಷನ್ ಕಮಲಕ್ಕೆ ಹೆದರಿ ಹೈದ್ರಾಬಾದ್ ಸೇರಿದ್ದ ‘ಕೈ’-‘ತೆನೆ’ ಶಾಸಕರು ನಾಳೆ ವಾಪಸ್ ಆಗಲಿದ್ದಾರೆ.
ನಾಳೆ 4 ಗಂಟೆಗೆ ವಿಶ್ವಾಸ ಮತಯಾಚನೆ ನಡೆಯೋದ್ರಿಂದ ಜೆಡಿಎಸ್-ಕಾಂಗ್ರೆಸ್ ಶಾಸಕರೆಲ್ಲ ಬೆಂಗಳೂರಿಗೆ ವಾಪಸ್ ಬರಲಿದ್ದಾರೆ. ನಾಳೆ ಬೆಳಿಗ್ಗೆ ಶಾಸಕರು ಹೈದ್ರಾಬಾದ್ ನಿಂದ ಹೊರಡಲಿದ್ದಾರೆ. ನಿನ್ನೆ ರಾತ್ರಿ ಮೂರು ಬಸ್ ಗಳಲ್ಲಿ ಶಾಸಕರು ಹೈದ್ರಾಬಾದ್ ಗೆ ಪ್ರಯಾಣ ಬೆಳೆಸಿದ್ದರು. ಆದರೆ ವಿಮಾನದಲ್ಲಿ ಬೆಂಗಳೂರಿಗೆ ವಾಪಸ್ ಬರಲು ಮುಂದಾಗಿದ್ದಾರೆ. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಶಾಸಕರು ವಾಪಸ್ ಬರಲಿದ್ದಾರೆ. ಡಿ.ಕೆ.ಶಿವಕುಮಾರ್ ಅವರ ಈ ನಿರ್ಧಾರಕ್ಕೆ ಶಾಸಕರು ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.
Comments