ಬಿಗ್ ಬ್ರೇಕಿಂಗ್ : ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಗೆ ಡೇಟ್ ಫಿಕ್ಸ್

ಜಯನಗರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ವಿಜಯ್ ಕುಮಾರ್ ನಿಧನ ಹಿನ್ನೆಲೆಯಲ್ಲಿ ಕ್ಷೇತ್ರದ ಚುನಾವಣೆಯಲ್ಲಿ ಮುಂದೂಡಲಾಗಿತ್ತು. ಇಂದು ಜಯನಗರ ವಿಧಾನ ಸಭಾ ಕ್ಷೇತ್ರಕ್ಕೆ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಲಿದೆ.
ಈ ಬಗ್ಗೆ ಇಂದು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಚುನಾವಣಾ ಆಯೋಗ ಜೂನ್ 11 ಚುನಾವಣೆ ರಂದು ನಡೆಯಲಿದೆ, ಜೂನ್ 16ಕ್ಕೆ ಮತ ಏಣಿಕೆ, ಯನ್ನು ನಡೆಸಲಾಗುವುದು ಅಂತ ತಿಳಿಸಿದೆ. ಈ ಮೂಲಕ ಶಾಸಕ ವಿಜಯಕುಮಾರ್ ನಿಧನದಿಂದ ಸ್ಥಗಿತಗೊಂಡಿದ್ದ ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಚಾಲನೆ ದೊರೆತಿದೆ. ನಾಮಪತ್ರ ಸಲ್ಲಿಕೆಗೆ ಮೇ 25 ಕೊನೆ ದಿವಸವಾಗಿದೆ, ಮೇ 28ರಂದು ನಾಮಪತ್ರ ವಾಪಸ್ಸು ತೆಗೆದುಕೊಳ್ಳುವುದಕ್ಕೆ ಕೊನೆ ದಿವಸವಾಗಿದ್ದು, ಬಿಜೆಪಿಗೆ ಮಾತ್ರ ನಾಮಪತ್ರ ಸಲ್ಲಿಸುವುದಕ್ಕೆ ಅವಕಾಶವಿದೆ. ಇನ್ನು ರಾಜ್ಯದ ಒಟ್ಟು 224 ವಿಧಾನಸಭಾ ಕ್ಷೇತ್ರಗಳ ಪೈಕಿ 222 ವಿಧಾನಸಭೆಗೆ ಚುನಾವಣೆ ನಡೆದು, ಫಲಿತಾಶ ಘೋಷಣೆಯಾಗಿದ್ದು, ಜಯನಗರ ಹಾಗೂ ಆರ್.ಆರ್ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆಗೆ ನಡೆಯಬೇಕಾಗಿದ್ದು ಈ ಪೈಕಿ ಜಯನಗರ ವಿಧಾನಸಭೆಗೆ ಜೂನ್ 11 ಚುನಾವಣೆ ನಡೆಯಲಿದ್ದು, ಈ ನಡುವೆ ಆರ್.ಆರ್ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯಬೇಕಾಗಿದೆ.
Comments