ಕೇಂದ್ರದ ವಿರುದ್ದ ಗರಂ ಆದ ಹೆಚ್ ಡಿ ಕುಮಾರಸ್ವಾಮಿ..!

ಕೇಂದ್ರ ಸರ್ಕಾರವು ಅಧಿಕಾರದ ದುರಪಯೋಗ ಪಡಿಸಿಕೊಳ್ಳುತ್ತಿದೆ. ಸಂವಿಧಾನದ ವಿರುದ್ಧವಾಗಿ ಬಿಜೆಪಿಯವರು ನಡೆದುಕೊಳ್ಳುತ್ತಿದ್ದಾರೆ. ರಾಜ್ಯಪಾಲ ವಜೂಭಾಯಿ ವಾಲಾರವರ ಮೇಲೆ ಕೇಂದ್ರ ಸರ್ಕಾರ ಒತ್ತಡ ಹಾಕಲಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ಗಂಭೀರವಾಗಿ ಆರೋಪವನ್ನು ಮಾಡಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ಬಿಜೆಪಿಗೆ ಬಹುಮತ ಸಾಬೀತು ಮಾಡಲು 15 ದಿನದ ಸಮಯವನ್ನು ನೀಡಿದ್ದು, ದೇಶದಲ್ಲಿಯೇ ಮೊದಲಾಗಿದೆ. ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಗೆ ರಾಜ್ಯಪಾಲರು 4 ರಿಂದ 5 ದಿನದ ಅವಕಾಶ ಕೋಡುವುದನ್ನು ಕೇಳಿದ್ದೇವೆ ಆದರೆ ಇಲ್ಲಿ 15 ದಿನದ ಅವಕಾಶ ಪಡೆದುಕೊಂಡ ಬಿಜೆಪಿ ಕುದುರೆ ವ್ಯಾಪಾರಕ್ಕೆ ಮುಂದಾಗಲಿದೆ ಎಂದು ಕುಮಾರಸ್ವಾಮಿಯವರು ಆರೋಪಿಸಿದ್ದಾರೆ.
Comments