ಮನಸ್ತಾಪ ಮರೆತು ಮತ್ತೆ ಒಂದಾದ ಕುಮಾರಸ್ವಾಮಿ-ಜಮೀರ್..!
ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಈ ಬಾರಿ ಸಾಕಷ್ಟು ಗೊಂದಲಗಳು ಉಂಟು ಆಗಿದ್ದವು. ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ಶಾಸಕ ಜಮೀರ್ ಅಹಮದ್ ಈ ಬಾರಿಯ ಚುನಾವಣೆಯಲ್ಲಿ ಗೆದ್ದು ಅವರ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಜಮೀರ್ ಮನಸ್ತಾಪವನ್ನು ಮರೆತು ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿದ್ದಾರೆ.
ಕುಮಾರಸ್ವಾಮಿ ಅವರೊಂದಿಗಿನ ಮನಸ್ತಾಪದ ಬಗ್ಗೆಯೂ ಕೂಡ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿ ಎರಡೂವರೆ ವರ್ಷವಾಗಿತ್ತು. ಇಂದು ಅವರೊಂದಿಗಿನ ಮಾತುಕತೆ ತಮಗೆ ಖುಷಿಯನ್ನು ತಂದಿದೆ ಎಂದು ಜಮೀರ್ ಹೇಳಿದ್ದಾರೆ. ರಾಜಕೀಯದಲ್ಲಿ ಇದೆಲ್ಲಾ ಇದ್ದೆ ಇರುತ್ತದೆ, ಅವರೂ ಕೂಡ ತಮನ್ನು ವಿರೋಧ ಮಾಡಿದ್ದರು. ಆದರೆ ಜೆಡಿಎಸ್ ಕಾಂಗ್ರೆಸ್ ಜೊತೆಗೆ ಸೇರಿ ಸರ್ಕಾರ ರಚನೆ ಮಾಡಲು ತೀರ್ಮಾನ ಮಾಡಿದ್ದಾರೆ. ಅದಕ್ಕಿ ನಮ್ಮ ಒಪ್ಪಿಗೆಯೂ ಕೂಡ ಇದೆ ಎಂದಿದ್ದಾರೆ.
Comments