ಈ ಸಲ ಕಪ್ ನಮ್ದೇ, ಸರ್ಕಾರವೂ ನಮ್ದೇ- ಪ್ರತಾಪ್ ಸಿಂಹ ಟ್ವೀಟ್

ಬಿಜೆಪಿಯ ಶಾಸಕಾಂಗ ಸಭೆಯು ಇಂದು ಬೆಳಗ್ಗೆ ಮಲ್ಲೇಶ್ವರಂ ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ ಮುಧೋಳದ ಶಾಸಕರಾದ ಗೋವಿಂದ ಕಾರಜೋಳ ಯಡಿಯೂರಪ್ಪನವರನ್ನು ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಗಿದೆ ಎಂದು ಸೂಚಿಸಿದರು.
ಶಿರಸಿಯ ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಪುತ್ತೂರು ಶಾಸಕ ಸಂಜೀವ ಮಠಂದೂರು ಮತ್ತು ರಾಣೆಬೆನ್ನೂರು ಶಾಸಕರಾದ ಆರ್. ಶಂಕರ್ ಕಾರಜೋಳ ಅವರು ಸೂಚನೆಯನ್ನು ಅನುಮೋದಿಸಿದರು. ಇದೇ ಸಮಯದಲ್ಲಿ ಬಿಜೆಪಿಯವರು ಸರ್ಕಾರ ರಚನೆಯ ಹಗಲು ಕನಸು ಕಾಣುತ್ತಿದ್ದಾರೆ ಎನ್ನುವ ಪ್ರತಿಗೆ ಮೈಸೂರು ಸಂಸದ ಪ್ರತಾಪ್ ಸಿಂಹ ಈ ಬಾರಿ ಕಪ್ ನಮ್ದೇ, ಸರ್ಕಾರವೂ ನಮ್ದೇ ಎಂದು ಟ್ವೀಟ್ ಪ್ರತಿಕ್ರಿಯಿಸಿದ್ದಾರೆ.
Comments