ಬಿಜೆಪಿ ಸರ್ಕಾರ ರಚನೆಗೆ ರಾಜ್ಯಪಾಲರ ಅವಕಾಶ! ಬಿಎಸ್ ವೈ ಮುಖ್ಯಮಂತ್ರಿನಾ?
ರಾಜ್ಯ ವಿಧಾನ ಸಭಾ ಚುನಾವಣೆಯ ಫಲಿತಾಂಶ ನೆನ್ನೆ ಅಷ್ಟೆ ಹೊರಬಂದಿದ್ದು ಎಲ್ಲರ ತಲೆ ಕೆಡುವಂತೆ ಮಾಡಿದೆ. ಬಹುಮತ ಪಡಿದಿರುವ ಬಿಜೆಪಿ ಕೂಡ ಸರ್ಕಾರ ರಚಿಸಲು ಸಾಧ್ಯವಾಗದೆ ಇಕ್ಕಟ್ಟಿನ ಪರಿಸ್ಥಿತಿಯಲ್ಲಿದೆ.
ನಾಳೆ ಬೆಳಗ್ಗೆ 9:30ಕ್ಕೆ ರಾಜ್ಯದ ಮುಖ್ಯಮಂತ್ರಿಯಾಗಿ ಶಿಕಾರಿಪುರ ಶಾಸಕರಾದ ಮತ್ತು ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರ ಸ್ವೀಕಾರ ಮಾಡಲಿದ್ದಾರೆ ಎಂದು ತಿಳಿಸಲಾಗುತ್ತಿದೆ. ಈ ಬಗ್ಗೆ ಬಿಜೆಪಿ ಪಕ್ಷವು ಸರ್ಕಾರ ರಚನೆ ಮಾಡುವುದಕ್ಕೆ ರಾಜ್ಯಪಾಲ ವಜೂಬಾಯಿ ವಾಲ ಅವರು ಅವಕಾಶ ನೀಡಿದ್ದು, ಇನ್ನೂ 11 ದಿನಗಳ ಒಳಗೆ ಬಹುಮತ ಸಾಬೀತು ಪಡಿಸುವಂತೆ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
Comments