ಈ ಬಾರಿ ಎಚ್' ಡಿಕೆ ಗೆ ಸಿಎಂ ಪಟ್ಟ ಖಚಿತ..!
ರಾಜ್ಯ ವಿಧಾನಸಭಾ ಚುನಾವಣೆಯ ಬೆನ್ನಲೆ ಕಾಂಗ್ರೆಸ್ ನೀಡಿರುವ ಮೈತ್ರಿ ಪ್ರಸ್ತಾವನೆಯನ್ನು ಜೆಡಿಎಸ್ ಕಾರ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ಒಪ್ಪಿಗೆಯನ್ನು ಸೂಚಿಸಿದ್ದಾರೆ. ಒಪ್ಪಿಗೆ ಸೂಚಿಸಿರುವ ಪತ್ರದೊಂದಿಗೆ ಇಂದು ಸಂಜೆ 5.30 ರಿಂದ 6 ಗಂಟೆಗೆ ರಾಜ್ಯಪಾಲರ ಭೇಟಿಗೆ ಅವಕಾಶವನ್ನು ಕೂಡ ಕೋರಿದ್ದಾರೆ. ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ 104, ಕಾಂಗ್ರೆಸ್ 78 ಹಾಗೂ ಜೆಡಿಎಸ್ 37, ಬಿಎಸ್'ಪಿ 1, ಇತರರರು 2 ಸ್ಥಾನ ಪಡೆದುಕೊಂಡಿರೋದು ಈಗಾಗಲೇ ಎಲ್ಲರಿಗೂ ತಿಳಿದೆ ಇದೆ.
ಸರ್ಕಾರ ರಚಿಸಲು ಮ್ಯಾಜಿಕ್ ನಂಬರ್ 112 ಬಾರದ ಕಾರಣ ಜೆಡಿಎಸ್ ಜೊತೆ ಮೈತ್ರಿಯೊಂದಿಗೆ ಸರ್ಕಾರ ರಚಿಸಲು ಕಾಂಗ್ರೆಸ್ ಯೋಜನೆಯನ್ನು ರೂಪಿಸಿದ್ದು ಕುಮಾರಸ್ವಾಮಿಯವರಿಗೆ ಮುಖ್ಯಮಂತ್ರಿ ಸ್ಥಾನದ ಅವಕಾಶ ನೀಡುವುದ್ದಾಗಿ ಹೇಳಿದರು. ಫಲಿತಾಂಶ ಅಂತಿಮಗೊಂಡ ಕೆಲವೇ ಗಂಟೆಗಳಲ್ಲಿ ಈ ವಿಷಯದ ಬಗ್ಗೆ ಚರ್ಚೆಯನ್ನು ಕೂಡ ಮಾಡಿದ್ದರು. ಈ ಬಗ್ಗೆ ಸ್ವತಃ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದರು. ಫಲಿತಾಂಶವು ಹೊರಬಂದ ಮೇಲೂ ಕೂಡ ಅಧಿಕಾರದ ಗದ್ದುಗೆ ಯಾರಿಗೆ ಅನ್ನೊ ಕುತೂಹಲ ಇನ್ನೂ ಬಾಕಿಯಿದೆ.
Comments