'ತೆನೆ' ಪಕ್ಷಕ್ಕೆ ಬೆಂಬಲ ನೀಡಲು 'ಕೈ' ಪಕ್ಷ ನಿರ್ಧಾರ..!
ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಂದ ಬೆನ್ನಲೆ, ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ನೀಡಿರುವ ಜನರ ಆದೇಶವನ್ನು ಪಾಲಿಸುತ್ತೇವೆ. ಜಾತ್ಯಾತೀತ ಪಕ್ಷದ ಸ್ಥಾಪನೆಗಾಗಿ ನಾವು ಜೆಡಿಎಸ್ ಅನ್ನು ಬೆಂಬಲಿಸಲು ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷವೂ ಕೂಡ ಅಧಿಕಾರ ಹಿಡಿಯುವಂತಹ ಬಹುಮತವನ್ನು ಸಾಧಿಸಿಲ್ಲ. ಜಾತ್ಯಾತೀತ ಪಕ್ಷದ ಉಳಿವಿಗಾಗಿ ನಾವು ಜೆಡಿಎಸ್ ಅನ್ನು ಬೆಂಬಲಿಸಲಿದ್ದೇವೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಝಾದ್, "ನಾವು ಆಗಲೇ ಎಚ್.ಡಿ. ದೇವೇಗೌಡ ಹಾಗು ಕುಮಾರಸ್ವಾಮಿಯವರೊಂದಿಗೆ ಫೋನ್ ಕರೆಯ ಮೂಲಕ ಮಾತನಾಡಿದ್ದೇವೆ. ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ" ಎಂದಿದ್ದಾರೆ.
Comments