ವಿಧಾನಸಭಾ ಮೆಗಾಫೈಟ್- ಕಮಲಕ್ಕೆ ಮುನ್ನಡೆ, ಕೈಗೆ ಭಾರೀ ಹಿನ್ನಡೆ..!

ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶದ ಮತಎಣಿಕೆಯು ಮುಂದುವರಿದಿದ್ದು ಬಹುತೇಕ ಎಲ್ಲರ ಸೋಲು ಗೆಲುವು ಖಚಿತವಾಗಿದೆ.
ಭಾರತೀಯ ಜನತಾ ಪಕ್ಷ 107 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ 65 ಸ್ಥಾನ ಹಾಗೂ ಜೆಡಿಎಸ್ 43 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. 30 ಜಿಲ್ಲೆಗಳ 38 ಮತಎಣಿಕೆ ಕೇಂದ್ರಗಳಲ್ಲಿ ಮಂಗಳವಾರ ಬೆಳಗ್ಗೆ 8ಗಂಟೆಯಿಂದ ಮತಎಣಿಕೆ ಆರಂಭವಾಗಿತ್ತು. ಮಧ್ಯಾಹ್ನದ ವೇಳೆಗೆ ಎಲ್ಲಾ ಪಕ್ಷಗಳ ಸ್ಪಷ್ಟ ಚಿತ್ರಣ ಹೊರಬೀಳಲಿದೆ.ಸದ್ಯದ ಫಲಿತಾಂಶದ ಪ್ರಕಾರ ಬಿಜೆಪಿ 100ಕ್ಕಿಂತಲೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆಡಳಿತಾರೂಢ ಕಾಂಗ್ರೆಸ್ ಕೇವಲ 65 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. 222 ಕ್ಷೇತ್ರಗಳ ಮತಎಣಿಕೆ ನಡೆಯುತ್ತಿದ್ದು ಈ ಬಾರಿ ಯಾರ ಪಾಲಿಗೆ ಅಧಿಕಾರದ ಗದ್ದುಗೆ ಒಲಿಯಲಿದೇ ಅನ್ನೋದಕ್ಕೆ ಇನ್ನೂ ಕೆಲವೇ ಕ್ಷಣಗಳಲ್ಲಿ ತೆರೆ ಬೀಳಲಿದೆ.
Comments