ವಿಧಾನಸಭಾ ಚುನಾವಣೆ ಹಿನ್ನಲೆ- ಮೂರು ಮತಗಟ್ಟೆಗಳಲ್ಲಿ ಇಂದು ಮರು ಮತದಾನ
ರಾಜ್ಯ ವಿಧಾನ ಸಭಾ ಚುನಾವಣೆಯು ಕಳೆದ ಶನಿವಾರವಷ್ಟೆ ಮುಗಿದಿದೆ. ಆದರೆ ಕೆಲವು ಕಡೆ ತಾಂತ್ರಿಕ ಕಾರಣಗಳಿಂದ ಮತ್ತು ಚುನಾವಣಾ ಸಿಬ್ಬಂದಿಯ ಲೋಪದೋಷದಿಂದಾಗಿ ಮತದಾನಕ್ಕೆ ಅಡ್ಡಿ ಉಂಟಾದ ಕಾರಣ ರಾಜ್ಯದ 3 ಮತಗಟ್ಟೆಗಳಲ್ಲಿ ಇಂದು ಮರು ಮತದಾನ ನಡೆಯುತ್ತಿದೆ.
ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಲೊಟ್ಟೆಗೊಲ್ಲಹಳ್ಳಿಯಲ್ಲಿ ಒಂದು ಮತಗಟ್ಟೆ ಮತ್ತು ಕೊಪ್ಪಳ ಜಿಲ್ಲೆಯ ಕುಷ್ಟಗಿ ಕ್ಷೇತ್ರದ ಎರಡು ಮತಗಟ್ಟೆಗಳಲ್ಲಿ ಮರುಮತದಾನವು ಇಂದು ನಡೆಯುತ್ತಿದೆ. ಮರು ಮತದಾನ ನಡೆಯುವ ಮತಗಟ್ಟೆಯ ಮತದಾರರಿಗೆ ಎಡಗೈ ಮಧ್ಯ ಬೆರಳಿಗೆ ಅಳಿಸಲಾಗದ ಶಾಯಿ ಹಾಕಲಾಗುತ್ತಿದೆ.
Comments