"ಈ ಕ್ಷೇತ್ರದಲ್ಲಿ ಯಾವುದೇ ಬಟನ್ ಒತ್ತಿದರೂ ಕಮಲಕ್ಕೆ ಮತ"- ಕಾಂಗ್ರೆಸ್ ವಕ್ತಾರ ಬೃಜೇಶ್ ಕಾಳಪ್ಪ ಆರೋಪ

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಇಂದು 222 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು ಮತದಾರರು ತಮ್ಮ ಇಷ್ಟವಾದ ಅಭ್ಯರ್ಥಿಗೆ ಮತ ಹಾಕುತ್ತಿದ್ದಾರೆ. ಆದರೆ ರಾಜ್ಯದ ಹಲವು ಕಡೆ ವಿದ್ಯುನ್ಮಾನ ಮತಯಂತ್ರಗಳಲ್ಲಿ ದೋಷ ಇರುವುದು ಪತ್ತೆಯಾಗಿದೆ ಎಂದು ಕಾಂಗ್ರೆಸ್ ವಕ್ತಾರ ಬೃಜೇಶ್ ಕಾಳಪ್ಪ,ಹೇಳಿದ್ದಾರೆ.
ಈ ಬಗ್ಗೆ ಟ್ವೀಟರ್ ನಲ್ಲಿ ಟ್ವೀಟೊಂದನ್ನು ಮಾಡಿ "ಬೆಂಗಳೂರಿನ ಮತದಾನ ಕೇಂದ್ರ ಒಂದರಲ್ಲಿ ಇವಿಎಂನಲ್ಲಿ ಯಾವುದೇ ಬಟನ್ ಒತ್ತಿದರೂ ಅದು ಬಿಜೆಪಿಗೆ ಹೋಗುತ್ತಿದೆ, ಆಕ್ರೋಶಿತ ಮತದಾರರು ಮತದಾನ ಮಾಡದೆ ಹಿಂದಿರುಗುತ್ತಿದ್ದಾರೆ,'' ಎಂದು ಟ್ವೀಟ್ ಮಾಡಿ ಕೊಂಡಿದ್ದಾರೆ. "ನನ್ನ ಹೆತ್ತವರ ಅಪಾರ್ಟ್ ಮೆಂಟ್ ಇರುವ ಆರ್‍ಎಂವಿ 2ನೇ ಹಂತ ಬೆಂಗಳೂರು ಇಲ್ಲಿ 5 ಬೂತುಗಳಿದ್ದು, ಅದರಲ್ಲಿ ಎರಡನೇ ಬೂತಿನಲ್ಲಿ ಯಾವುದೇ ಬಟನ್ ಒತ್ತಿದರೂ ಮತ ಕೇವಲ ಕಮಲಕ್ಕೆ ಹೋಗುತ್ತಿದೆ,'' ಎಂದು ದೂರಿ ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
Comments