ಗುರುತಿನ ಚೀಟಿ ಇಲ್ಲದೆಯೂ ಕೂಡ ಮತ ಚಲಾಯಿಸಬಹುದು...ಹೇಗೆ ಗೊತ್ತಾ?
ನಿಮ್ಮ ಅಮೂಲ್ಯವಾದ ಮತವನ್ನು ಗುರುತಿನ ಚೀಟಿ ಇಲ್ಲ ಎಂಬ ಕಾರಣಕ್ಕೆ ಹಾಳು ಮಾಡಿಕೊಳ್ಳಬೇಡಿ. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರಾಯ್ತು ನೀವು ಮತ ಚಲಾಯಿಸಬಹುದು. ಪರ್ಯಾಯ ಗುರುತಿನ ಚೀಟಿಯನ್ನು ತೆಗೆದುಕೊಂಡು ಹೋದರೆ ಚುನಾವಣಾ ಅಧಿಕಾರಿಗಳು ಮತ ಹಾಕಲು ಅವಕಾಶ ನೀಡುತ್ತಾರೆ.
ಗುರುತಿನ ಚೀಟಿ ಕಳೆದುಹೋಗಿದ್ದರೆ, ಅಥವಾ ತಕ್ಷಣಕ್ಕೆ ಕೈಯಲ್ಲಿ ಇಲ್ಲದೇ ಇದ್ದರೆ ಸರ್ಕಾರದ ಇಲಾಖೆ ನೀಡಿದ ಬೇರೆ ಯಾವುದೇ ಗುರುತಿನ ಚೀಟಿ ಬಳಸಿ ಮತದಾನ ಮಾಡಬಹುದು.
- ಪಾಸ್ಪೋರ್ಟ್
- ಚಾಲನಾ ಪರವಾನಿಗೆ ಪತ್ರ
- ಪಾನ್ ಕಾರ್ಡ್
- ಆಧಾರ್ ಕಾರ್ಡ್
- ಚುನಾವಣಾ ಆಯೋಗ ನೀಡಿರುವ ಅಧಿಕೃತ ಪೋಟೋ ವೋಟರ್ ಸ್ಲಿಪ್
- ಸಂಸದ/ಶಾಸಕ/ವಿಧಾನ್ ಪರಿಷತ್ ಸದಸ್ಯರಿಗೆ ನೀಡಲಾಗಿರುವ ಅಧಿಕೃತ ಗುರುತಿನ ಚೀಟಿ
- ತಮ್ಮ ಕರ್ತವ್ಯಕ್ಕೆ ಸಂಬಂಧಿಸಿದ ಗುರುತಿನ ಚೀಟಿ- ಕೇಂದ್ರ/ರಾಜ್ಯ ಸರ್ಕಾರಿ ನೌಕರರಿಗೆ ಮಾತ್ರ
- ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್ ಪಾಸ್ ಬುಕ್ ( ಭಾವಚಿತ್ರ ಸಮೇತ ಇರುವಂಥದ್ದು)
- ಎನ್‌ಪಿಆರ್ ಅಡಿಯಲ್ಲಿ ಆರ್‌ಜಿಐ ನೀಡಿರುವ ಸ್ಮಾರ್ಟ್ ಕಾರ್ಡ್
- MGNREAGA ಜಾಬ್ ಕಾರ್ಡ್
- ಕಾರ್ಮಿಕ ಇಲಾಖೆ ನೀಡಿರುವ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್
- ಭಾವಚಿತ್ರ ಸಮೇತವಿರುವ ನಿವೃತ್ತಿ ದಾಖಲೆಗಳು ಯಾವುದೇ ಗುರುತಿನ ಚೀಟಿ ಜತೆಗೆ ವೋಟರ್ ಸ್ಲಿಪ್ ಇದ್ದರೂ ಮತದಾನ ಮಾಡಲು ಅವಕಾಶ ನೀಡಲಾಗಿದೆ.
Comments