Report Abuse
Are you sure you want to report this news ? Please tell us why ?
ನಾಳೆ ಮತ ಹಾಕುವವರಿಗೆ ಗುಡ್ ನ್ಯೂಸ್

11 May 2018 11:28 AM | Politics
612
Report
ರಾಜ್ಯ ವಿಧಾನಸಭೆ ಚುನಾವಣೆಗೆ ಮೇ 12 ರಂದು ಮತದಾನ ನಡೆಯಲಿದೆ. ಮತದಾನದ ಅವಧಿಯನ್ನು ಮೊದಲಿಗಿಂತ 1 ಗಂಟೆ 30 ನಿಮಿಷ ಹೆಚ್ಚಿಸಲಾಗಿದೆ.
ಈ ಮೊದಲು ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ರ ವರೆಗೆ ವೋಟಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಈ ವಿಧಾನಸಭೆ ಚುನಾವಣೆಯಲ್ಲಿ ಮತದಾನದ ಅವಧಿಯನ್ನು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6.30 ರ ವರೆಗೆ ವಿಸ್ತರಿಸಿ ಚುನಾವಣಾ ಆಯೋಗವು ಆದೇಶವನ್ನು ಹೊರಡಿಸಿದೆ. ಮತದಾರರಿಗೆ ಅನುಕೂಲವಾಗುವ ಉದ್ದೇಶದಿಂದ ಚುನಾವಣಾ ಆಯೋಗ ಈ ಕ್ರಮವನ್ನು ಕೈಗೊಂಡಿದೆ.

Edited By
Manjula M

Comments