ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ: ಚುನಾವಣಾ ಪ್ರಚಾರಕ್ಕೆ ಇಂದು ಸಂಜೆ ತೆರೆ..!

ಇದೀಗ ಎಲ್ಲೆ ನೋಡಿದರೂ ಕೂಡ ಚುನಾವಣೆಯ ಬಿರುಸಿನ ಪ್ರಚಾರ ಕಾಣಿಸುತ್ತಿದೆ. ಕರ್ನಾಟಕ ವಿಧಾನಸಭಾ ಚುನಾವಣೆಗೆ ಇದೀಗ ಕ್ಷಣಗಣನೆ ಪ್ರಾರಂಭವಾಗಲಿದೆ. ಅಧಿಕಾರದ ಚುಕ್ಕಾಣಿ ಹಿಡಿಯುವುದಕ್ಕಾಗಿ ಎಲ್ಲರೂ ಕೂಡ ತಮ್ಮತಮ್ಮ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ನಡೆಯುತ್ತಿದೆ.
ಆದರೆ ಬಿರುಸಿನ ಪ್ರಚಾರಕ್ಕೆ ಇಂದು ತೆರೆ ಬೀಳಲಿದೆ.. ಹೌದು ಇಂದು ಸಂಜೆ 5 ಗಂಟೆಗೆ ಬಹಿರಂಗ ಚುನಾವಣಾ ಪ್ರಚಾರ ಮುಕ್ತಾಯವಾಗಲಿದೆ.ಇಂದು ಸಂಜೆ 5 ಗಂಟೆಯ ಒಳಗೆ ಎಲ್ಲಾ ರಾಜಕೀಯ ನಾಯಕರು ಹೊರಗಿನ ಪ್ರದೇಶಗಳಲ್ಲಿ ಮತ ಕೇಳುವಂತಿಲ್ಲ. ತಮ್ಮ ಸ್ವಂತ ಕ್ಷೇತ್ರದಲ್ಲಿ ಮಾತ್ರ ಕೇಳಬಹುದು. ಇದೇ ನಿಟ್ಟಿನಲ್ಲಿ ಬೆಂಗಳೂರಿನಲ್ಲೂ ಕೂಡ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಇಂದು ಸಂಜೆ 6 ಗಂಟೆಯಿಂದ ಭಾನುವಾರ ಅಂದರೆ ಮೇ 13 ರವರೆಗೆ ನಿಷೇದಾಜ್ಞೆಯನ್ನು ಹೊರಡಿಸಿದೆ ಎಂದು ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.
1. ಗುರುವಾರ ಅಂದರೆ ಇಂದು ಸಂಜೆ 5 ಗಂಟೆಯಿಂದ ಹತ್ತು ಜನಕ್ಕಿಂತ ಹೆಚ್ಚು ರಾಜಕೀಯ ಪಕ್ಷಗಳ ಮುಖಂಡರುಗಳಾಗಲಿ ಅಥವಾ ಕಾರ್ಯಕರ್ತರಾಗಲಿ ಮನೆ ಮನೆಗೆ ಭೇಟಿ ನೀಡಿ ಮತವನ್ನು ಯಾಚಿಸುವಂತಿಲ್ಲ.
2. ಯಾವುದೇ ಸಂಘಟನೆಗಳು, ರಾಜಕೀಯ ಪಕ್ಷಗಳು, ಧಾರ್ಮಿಕ ಸಂಸ್ಥೆಗಳು ಮೆರವಣಿಗೆ ಹಾಗೂ ಪ್ರತಿಭಟನೆಗಳನ್ನು ಕೂಡ ನಡೆಸುವಂತಿಲ್ಲ.
3. ಕತ್ತಿ, ಖಡ್ಗ, ಚೂರಿ, ಬಂದೂಕು, ಸ್ಫೋಟಕ ಮತ್ತು ಅರಿತ ವಸ್ತುಗಳನ್ನು ಸಾಗಾಣೆ ಮಾಡುವಂತಿಲ್ಲ.
ಈ ಮೇಲ್ಕಂಡ ಯಾವುದೇ ಕೆಲಸಗಳನ್ನು ರಾಜಕೀಯ ಪಕ್ಷಗಳು ಮಾಡುವಂತಿಲ್ಲ.
Comments