ಉಪ್ಪಿ ಕಟ್ಟಿ,ಬಿಟ್ಟಿದ KPJP ಸ್ಥಿತಿ ಈಗ ಹೇಗಿದೆ? ಚುನಾವಣಾ ಅಖಾಡದಲ್ಲಿ ಸ್ಪರ್ಧಿಸಿರುವವರ ವಿವರ ಇಲ್ಲಿದೆ..!

ರಾಜ್ಯ ವಿಧಾನಸಭಾ ಚುಣಾವಣೆಯ ಹಿನ್ನಲೆಯಲ್ಲಿ ಎಲ್ಲಾ ಪಕ್ಷದವರು ಚುನಾವಣಾ ಪ್ರಚಾರವನ್ನು ನಡೆಸುತ್ತಿದ್ದಾರೆ. ಅಂದುಕೊಂಡಂತೆ ಆಗಿದ್ದರೆ ರಿಯಲ್ ಸ್ಟಾರ್ ಉಪೇಂದ್ರ ಕೂಡ ತಮ್ಮ ಕೆಪಿಜೆಪಿ (ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ) ಪಕ್ಷದಿಂದ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಬೇಕಿತ್ತು. ಆದರೆ ರಿಯಲ್ ಸ್ಟಾರ್ ನ ಲೆಕ್ಕಾಚಾರ ಇದೀಗ ಉಲ್ಪಾ ಹೊಡೆದು ಅವರೇ ಪಾರ್ಟಿಯಿಂದ ಹೊರ ಬಂದರು.
ಕೆಪಿಜೆಪಿ ಪಕ್ಷ ಈ ಬಾರಿಯ ಚುನಾವಣೆಗೆ ಯಾವ ರೀತಿ ಸಿದ್ಧವಾಗಿದೆ ಎನ್ನುವ ಕುತೂಹಲ ಕೂಡ ಎಲ್ಲರಲ್ಲೂ ಮೂಡಿದೆ. ಒಂದು ಕಡೆ ಉಪೇಂದ್ರ ಸಿನಿಮಾದ ಶೂಟಿಂಗ್ ಕೆಲಸಗಳಲ್ಲಿ ಸಿಕ್ಕಾಪಟ್ಟೆ ಬಿಜಿ….ಉಪೇಂದ್ರ ಹೊರ ಬಂದ ಮೇಲೆ ಕೆಪಿಜೆಪಿಯ ಸ್ಥಿತಿ ಹೇಗಿದೆ ಎನ್ನುವ ಪ್ರಶ್ನೆ ಸಾಕಷ್ಟು ಜನರನ್ನು ಕಾಡುತ್ತಿದೆ.. ಕರ್ನಾಟಕ ಚುನಾವಣೆಯಲ್ಲಿ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ 32 ಕ್ಷೇತ್ರದಿಂದ ಚುನಾವಣಾ ಅಖಾಡಕ್ಕೆ ಇಳಿದಿದೆ. ಮೊದಲು 60 ಜನರಿಗೆ ಬಿ ಫಾರಂ ನೀಡಿದ್ದು, ಆಮೇಲೆ 45 ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಆಲೋಚನೆಯಲ್ಲಿ ಇದ್ದರಂತೆ. ಆದರೆ ಕೊನೆಗೆ 32 ಸ್ಪರ್ಧಿಗಳು ಫೈನಲ್ ಆಗಿದ್ದಾರೆ ಎಂದು ಕೆಪಿಜೆಪಿಯ ಸಂಸ್ಥಾಪಕ ಅಧ್ಯಕ್ಷ ಮಹೇಶ್ ಗೌಡ ತಿಳಿಸಿದ್ದಾರೆ. ಕೆಪಿಜೆಪಿ ಪಕ್ಷ ಮುಖ್ಯವಾಗಿ ಬೆಂಗಳೂರಿನ ಕಡೆ ಗಮನ ಹರಿಸಿದೆ. 32 ಅಭ್ಯರ್ಥಿಗಳ ಪೈಕಿ ಬೆಂಗಳೂರಿನ 11 ಕ್ಷೇತ್ರದಲ್ಲಿ ಕೆಪಿಜೆಪಿ ಪಕ್ಷವು ಸ್ಪರ್ಧೆ ಮಾಡಲಿದೆ. ಉಳಿದಂತೆ ತುಮಕೂರುನಲ್ಲಿ 3 ಕ್ಷೇತ್ರ, ಮೈಸೂರು ಮತ್ತು ಮಂಡ್ಯದಲ್ಲಿ ತಲಾ 2 ಹಾಗೂ ದಾವಣಗೆರೆಯ 3 ಕ್ಷೇತ್ರದಿಂದ ಅಭ್ಯರ್ಥಿಗಳು ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.
Comments