ಕರ್ನಾಟಕದಲ್ಲಿ ಮೊದಲ ಬಾರಿಗೆ ಆನ್ ಲೈನ್ ಮತದಾನ
ರಾಜ್ಯ ವಿಧಾನ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಮತದಾನದ ದಿನದಂದು ಅಂದರೆ ಮೇ 12 ರಂದು ಎಲ್ಲರಿಗೂ ಕೂಡ ಚುನಾವಣಾ ಆಯೋಗ ರಜೆಯನ್ನು ಘೋಷಿಸಿದೆ.
ರಾಜ್ಯ ಇದೇ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಆನ್ ಲೈನ್ ಮತದಾನಕ್ಕೆ ಅವಕಾಶವನ್ನುಕಲ್ಪಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ ತಿಳಿಸಿದ್ದಾರೆ. ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಮತದಾರರು ಈ ಪ್ರಯೋಜನವನ್ನು ಪಡೆಯಬಹುದು. ಆನ್ ಲೈನ್ ನಲ್ಲಿ ಅಭ್ಯರ್ಥಿಗಳು ಪಟ್ಟಿ ಪಡೆದು ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ಮತದಾನದ ಪ್ರಮಾಣ ಹಾಗೂ ಸಮಯ ಉಳಿತಾಯದ ಉದ್ದೇಶದಿಂದ ಈ ಆನ್ ಲೈನ್ ಮತದಾನಕ್ಕೆ ಅವಕಾಶವನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.
Comments