ಕಾಂಗ್ರೆಸ್ ಪರ ಮತಯಾಚಿಸಿದ ಲೂಸ್ ಮಾದ

ರಾಜ್ಯ ವಿಧಾನ ಸಭಾ ಚುನಾವಣಾ ಹಿನ್ನಲೆಯಲ್ಲಿ ಸ್ಟಾರ್ ನಟರು ಒಂದೊಂದು ಪಕ್ಷದ ಪರ ಪ್ರಚಾರ ಮಾಡುತ್ತಾರೆ. ಇದೀಗ ಸ್ಯಾಂಡಲ್ ವುಡ್ ನಟ ಲೂಸ್ ಮಾದ ಖ್ಯಾತಿಯ ಯೋಗೇಶ್ ಅವರು ಪ್ರಚಾರ ಕಾರ್ಯಕ್ಕೆ ಇಳಿದಿದ್ದು ಕಾಂಗ್ರೆಸ್ ಗೆ ಮತ ಹಾಕುವಂತೆ ಜನರಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಆರ್.ಕೆ.ರಮೇಶ್ ಪರವಾಗಿ ಪರಪ್ಪನ ಅಗ್ರಹಾರದಲ್ಲಿ ರೋಡ್ ಶೋನಲ್ಲಿ ಭಾಗವಹಿಸಿದ ನಟ ಯೋಗೇಶ್ ಅವರು ಮಾಧ್ಯಮದವರೊಂದಿಗೆ ಮಾತನಾಡಿ 'ಬಿಜೆಪಿ ಸರ್ಕಾರದವರು ಯಾವತ್ತೂ ಅಚ್ಛೇ ದಿನ್ ಅಚ್ಛೇ ದಿನ್ ಅಂತ ಹೇಳುತ್ತಾನೇ ಇದ್ದಾರೆ. ಅಚ್ಛೇ ದಿನ್ ಯಾರಿಗೂ ಬಂದಿಲ್ಲ. ಅದು ಏನು ಅನ್ನೋದು ಅರ್ಥನೂ ಆಗಿಲ್ಲ ನಮಗೆ. ಎಲ್ಲರೂ ಕಾಂಗ್ರೆಸ್ ಗೆ ಸಪೋರ್ಟ್ ಮಾಡಿ. ನಾನು ಇರೋವರೆಗೂ ಕಾಂಗ್ರೆಸ್ ಗೇ ಸಪೋರ್ಟ್ ಮಾಡೋದು. ನೀವೂ ಕೂಡ ಕಾಂಗ್ರೆಸ್ ಗೆ ಬೆಂಬಲ ಕೊಡಿ' ಎಂದು ತಿಳಿಸಿದ್ದಾರೆ. ಯಾವ ಸ್ಟಾರ್ ನಟರು ಪ್ರಚಾರ ಮಾಡಿದ್ರು ಕೂಡ ಮತದಾರರ ತಿರ್ಮಾನವೇ ಅಂತಿಮ ತಿರ್ಮಾನವಾಗಿರುತ್ತದೆ. ಜನ ಯಾವ ಪಕ್ಷವನ್ನು ಅಧಿಕಾರಕ್ಕೆ ತರುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.
Comments