ಹುಚ್ಚ ವೆಂಕಟ್ ಗೆ 'ಎಕ್ಕಡ' ಚಿಹ್ನೆ ಸಿಕ್ಕಿರೋದು ನಿಜಾನ.?
ರಾಜ್ಯ ವಿಧಾನ ಸಭಾ ಚುನಾವಣಾ ಹಿನ್ನಲೆಯಲ್ಲಿ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ರಾಜರಾಜೇಶ್ವರಿ ನಗರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿರುವುದು ಈಗಾಗಲೇ ಎಲ್ಲರಿಗೂ ತಿಳಿದೆ ಇದೆ.
ಹುಚ್ಚ ವೆಂಕಟ್ ಗೆ ಮತ ಹಾಕಬೇಕು ಅಂದ್ರೆ ಯಾವ ಗುರುತಿಗೆ ವೋಟ್ ಮಾಡಬೇಕು ಎಂಬ ಕುತೂಹಲಕ್ಕೆ ಇದೀಗ ಬ್ರೇಕ್ ಬಿದ್ದಿದೆ. ಎಸ್.. ಚುನಾವಣೆ ಆಯೋಗವೂ ಹುಚ್ಚ ವೆಂಕಟ್ ಅವರಿಗೆ ತಕ್ಕ ಚಿಹ್ನೆ ನೀಡಿದೆ ಎನ್ನಲಾಗಿದೆ. ವೆಂಕಟ್ ಅವರು ನೆಚ್ಚಿನ 'ಚಪ್ಪಲಿ' ಚಿಹ್ನೆ ನೀಡಿದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇನ್ನು ಇಷ್ಟು ದಿನ ಇತರರನ್ನ ಬೈಯಲು ನನ್ ಎಕ್ಕಡ ಎನ್ನುತ್ತಿದ್ದ ಹುಚ್ಚಾ ವೆಂಕಟ್ ಗೆ ಒಳ್ಳೆಯ ಗುರುತು ಸಿಕ್ಕಿದೆ ಎನ್ನಬಹುದು ಆದರೆ ಈ ಚಿಹ್ನೆ ಸಿಕ್ಕಿರುವುದು ಇನ್ನೂ ಕೂಡ ಫೈನಲ್ ಆಗಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಹಾಗಾದ್ರೆ ಹುಚ್ಚ ವೆಂಕಟ್ ಗೆ ಯಾವ ಚಿಹ್ನೆ ಸಿಗುತ್ತದೆ ಅನ್ನೋದನ್ನ ಕಾದು ನೋಡಬೇಕಿದೆ..
Comments