ಮತದಾನ ಹಿನ್ನಲೆ-1.32 ಲಕ್ಷ ಬಾಟಲ್ ಶಾಯಿ ಪೂರೈಕೆ

ರಾಜ್ಯ ವಿಧಾನ ಸಭಾ ಚುನಾವಣಗೆ ಈಗಾಗಲೇ ದಿನಾಂಕ ನಿಗದಿಯಾಗಿದ್ದು ಎಲ್ಲೆಡೆ ಬಿರುಸಿನ ಪ್ರಚಾರವನ್ನು ಮಾಡಲಾಗುತ್ತಿದೆ. ವಿಧಾನಸಭೆ ಚುನಾವಣೆಗೆ ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ(ಮೈಲ್ಯಾಕ್) ನಿಂದ 1.32 ಲಕ್ಷ ಬಾಟಲ್ ಅಳಿಸಲಾಗದ ಶಾಯಿ ಪೂರೈಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಚುನಾವಣಾ ಆಯೋಗವು ಅಳಿಸಲಾಗದ ಶಾಯಿ ಪೂರೈಕೆ ಮಾಡುವಂತೆ ಮೂರು ತಿಂಗಳ ಹಿಂದೆಯೇ ಮೈಲ್ಯಾಕ್ ಕಾರ್ಖಾನೆಗೆ ಬೇಡಿಕೆ ಇಡಲಾಗಿತ್ತು, ಅದರಂತೆ ಶಾಯಿ ಪೂರೈಕೆ ಮಾಡಲಾಗಿದೆ. 10 ಎಂ.ಎಲ್. ನ 1.32 ಲಕ್ಷ ಬಾಟಲ್ ಶಾಯಿ ಪೂರೈಕೆ ಮಾಡಲಾಗಿದ್ದು, 1.66 ಕೋಟಿ ರೂ. ವಹಿವಾಟುನ್ನು ನಡೆಸಲಾಗಿದೆ. ಮತದಾನ ಮಾಡಿದ ಸಂದರ್ಭದಲ್ಲಿ ಬೆರಳಿಗೆ ಶಾಯಿ ಹಾಕಲಾಗುತ್ತದೆ. ಇದು ಮತ ಈಗಾಗಲೆ ಹಾಕಿದ್ದಾರೆ ಎಂಬುದಕ್ಕೆ ಗುರುತು.
Comments