ಬಿಜೆಪಿಗೆ ಬಿಗ್ ಶಾಕ್ ಕೊಟ್ಟ ಚುನಾವಣಾ ಆಯೋಗ

ಚುನಾವಣೆ ಸಮಯದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಜಾಹೀರಾತುಗಳ ಮೂಲಕ ತಮ್ಮ ರೀತಿ, ನೀತಿಗಳನ್ನು ತಿಳಿಸಿಕೊಡುವುದಕ್ಕೆ ಮುಂದಾಗುತ್ತವೆ. ಇದರ ನಡುವೆ ಬಿಜೆಪಿ ಕಳೆದ ಕೆಲ ದಿನಗಳಿಂದ ವಿವಿಧ ಮಾಧ್ಯಮಗಳಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ದ ಜಾಹೀರಾತನ್ನು ಪ್ರಸಾರ ಮಾಡುತ್ತಿರುವ 3 ಜಾಹೀರಾತಿಗೆ ಚುನಾವಣಾ ಆಯೋಗವು ಕಡಿವಾಣ ಹಾಕಿದೆ.
ಮಾಧ್ಯಮಗಳಲ್ಲಿ ಸಿದ್ದರಾಮಯ್ಯ ಸರಕಾರದ ವಿರುದ್ಧ ಜನ ವಿರೋಧಿ, ಸರಕಾರ ನಕಲಿ ಭಾಗ್ಯಗಳ ಸರಕಾರ ಮುಂತಾದ ಜಾಹೀರಾತುಗಳನ್ನು ಬಿಜೆಪಿ ಜಾಹೀರಾತುಗಳನ್ನು ಪ್ರಸಾರ ಮಾಡುತಿತ್ತು, ಜಾಹೀರಾತುಗಳ ವಿರುದ್ದ ಕೋಪಗೊಂಡ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರುನ್ನು ನೀಡಿತ್ತು. ಕಾಂಗ್ರೆಸ್ ನ ಮನವಿಯನ್ನು ಅಂಗಿಕರೀಸಿದ ವ ಚುನಾವಣಾ ಆಯೋಗ, ಜನವಿರೋಧಿ ಸರಕಾರ, ನಕಲಿ ಭಾಗ್ಯಗಳ ಸರಕಾರ ಈ ಎರಡು ಜಾಹಿರಾತು ಸೇರಿದಂತೆ ಒಟ್ಟು 3 ಜಾಹೀರಾತನ್ನು ನಿಷೇಧಿಸುವಂತೆ ಈಗಾಗಲೇ ಆಜ್ಞೆಯನ್ನು ಹೊರಡಿಸಿದೆ.
Comments