ನಾಮಪತ್ರ ಅಂಗೀಕಾರ- ಅಶೋಕ್ ಖೇಣಿಗೆ ಸಿಕ್ತು ಬಿಗ್ ರಿಲೀಫ್
ನೈಸ್ ಮುಖ್ಯಸ್ಥ ಹಾಗೂ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಖೇಣಿ ಅವರ ನಾಮಪತ್ರ ಅಂಗೀಕಾರವಾಗಿದೆ.
ನಾಮಪತ್ರ ಪರಿಶೀಲಿಸಿದ ಚುನಾವಣಾಧಿಕಾರಿಯಾದ ವಿ.ಮನೋಹರ, ಟಿ.ಜೆ ಅಬ್ರಾಹಂ ಮಾಡಿದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ನಾಮಪತ್ರವನ್ನು ಅಂಗೀಕರಿಸುವ ಮೂಲಕ ಖೇಣಿಗೆ ಬಿಗ್ ರಿಲೀಫ್ ಅನ್ನು ನೀಡಿದ್ದಾರೆ. ಅಶೋಕ್ ಖೇಣಿ ನಕಲಿ ದಾಖಲೆಗಳನ್ನು ಸಲ್ಲಿಸಿದ್ದಾರೆಂದು ಟಿ.ಜೆ.ಅಬ್ರಾಹಂ ದೂರನ್ನು ನೀಡಿದ್ದರು. ಈ ಕಾರಣದಿಂದ ಖೇಣಿ ನಾಮಪತ್ರವನ್ನು ಅಂಗೀಕರಿಸಿರಲಿಲ್ಲ. ಇಂದು ದಾಖಲೆಗಳನ್ನು ಪರಿಶೀಲಿಸಿದ ನಂತರ ನಾಮಪತ್ರವನ್ನು ಅಂಗೀಕರಿಸಲಾಗಿದೆ ಎಂದು ತಿಳಿಸಿದರು.
Comments