ರೆಬಲ್ ಕಣದಿಂದ ಹಿಂದೆ ಸರಿಯಲು ಕಾರಣವೇನು ಗೊತ್ತಾ?
ಮಂಡ್ಯದ ಗಂಡು ಎಂದರೆ ನೆನಪಾಗೋ ಹೆಸರು ರೆಬಲ್ ಸ್ಟಾರ್ ಅಂಬರೀಷ್. ಅಷ್ಟರಮಟ್ಟಿಗೆ ಅಲ್ಲಿಯ ಜನರ ಪ್ರೀತಿ ಗಳಿಸಿಕೊಂಡಿದ್ದ ಅಂಬರೀಷ್ ಈ ಬಾರಿ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಟ್ಟರೂ ಸ್ಪರ್ಧಿಸುವುದಿಲ್ಲವೆಂದು ಬಿಟ್ಟಿದ್ದಾರೆ.
ಮನೆಗೇ ಬಿ ಫಾರಂ ಕಳುಹಿಸಿಕೊಟ್ಟರೂ ಅಂಬರೀಷ್ ಸ್ಪರ್ಧೆಯಿಂದ ಹಿಂದೆ ಸರಿಯಲು ಹಲವು ಕಾರಣಗಳಿವೆ ಎನ್ನಲಾಗಿದೆ. ಮೊದಲನೆಯದಾಗಿ ಮಂಡ್ಯ ಜಿಲ್ಲೆಯಲ್ಲೇ ಅಂಬರೀಷ್ ರನ್ನು ಮೂಲೆಗುಂಪು ಮಾಡುತ್ತಿರುವುದು. ಅವರನ್ನು ಕೇಳದೆಯೇ ಜಿಲ್ಲಾ ಕಾಂಗ್ರೆಸ್ ನ ನಿರ್ಧಾರಗಳು ನಡೆಯುತ್ತಿರುವುದರಿಂದ ಅಂಬಿಯಲ್ಲಿ ಅಸಮಾಧಾನವನ್ನು ಮೂಡಿಸಿದ್ದಾರೆ ಎನ್ನಲಾಗಿದೆ. ದೋಸ್ತಿಯಂತಿದ್ದ ಸಿಎಂ ಸಿದ್ದರಾಮಯ್ಯ ಕೂಡಾ ಅಂಬರೀಷ್ ಅಸಮಾಧಾನಕ್ಕೆ ಕಾರಣರಾಗಿದ್ದಾರೆ. ಅತ್ತ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅಂಬರೀಷ್ ಗೆಲುವಿನ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸಿ ಮಾತನಾಡಿದ್ದರು. ಇದೆಲ್ಲಾ ಅಂಬಿ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮಾಡಿತು ಎಂದು ಲೆಕ್ಕಾಚಾರವನ್ನು ಹಾಕಲಾಗುತ್ತಿದೆ. ಏನೆ ಆದರೂ ಅಂಬಿ ಕಣಕ್ಕೆ ಇಳಿಯದೆ ಇರುವುದು ಸಾಕಷ್ಟು ಅಭಿಮಾನಿಗಳಲ್ಲಿ ಬೇಸರ ತಂದಿರುವುದಂತೂ ನಿಜ.
Comments