ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯ- ಮತಯಾಚಿಯಲು ರಸ್ತೆಗಿಳಿದ ಶಾಸಕರು

ವಿಧಾನಸಭೆ ಚುನಾವಣೆಯ ಹಿನ್ನಲೆಯಲ್ಲಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆ ನೆನೆಯಷ್ಟೆ ಮುಕ್ತಾಯವಾಗಿದೆ. ಮೇ 12 ರಂದು ಚುನಾವಣೆ ನಡೆಯಲಿದ್ದು, ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳ ನಾಯಕರು ಬಿರುಸಿನ ಪ್ರಚಾರವನ್ನು ಕೈಗೊಂಡಿದ್ದಾರೆ.
ಚುನಾವಣೆ ಘೋಷಣೆಗೂ ಮೊದಲೇ ರಾಜ್ಯದೆಲ್ಲೆಡೆ ಪ್ರಚಾರದ ಭರಾಟೆ ವೇಗವಾಗಿಯೇ ಆರಂಭವಾಗಿತ್ತು. ಕಾಂಗ್ರೆಸ್, ಜೆ.ಡಿ.ಎಸ್., ಬಿ.ಜೆ.ಪಿ. ನಾಯಕರು ಹಿಂದಿನಿಂದಲೂ ಬಿರುಸಿನ ಪ್ರಚಾರ ನಡೆಸುತ್ತಲೆ ಬಂದಿದ್ದಾರೆ..ಚುನಾವಣೆ ಘೋಷಣೆ ಬಳಿಕ ಅಭ್ಯರ್ಥಿಗಳ ಆಯ್ಕೆ, ಬಂಡಾಯ, ಪಕ್ಷಾಂತರ, ಬಿ ಫಾರಂ, ಕ್ಷೇತ್ರ ಬದಲಾವಣೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಜೋರಾಗಿಯೇ ನಡೆದಿವೆ. ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಮನೆ ಮನೆಗೂ ತೆರಳಿ ಪ್ರಚಾರದಲ್ಲಿ ತೊಡಗಿದ್ದಾರೆ. ನಾಮಪತ್ರ ಸಲ್ಲಿಕೆ ಈಗಾಗಲೇ ಪೂರ್ಣಗೊಂಡಿದ್ದು, ರಾಜ್ಯದಲ್ಲಿ 2054 ಅಭ್ಯರ್ಥಿಗಳು 4336 ನಾಮಪತ್ರ ಸಲ್ಲಿಸಿದ್ದಾರೆ. 1920 ಪುರುಷ, 137 ಮಹಿಳಾ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ. ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆ ಪೂರ್ಣಗೊಂಡಿದ್ದು, ಏಪ್ರಿಲ್ 27 ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನವಾಗಿದೆ.
Comments