ರಾಜಕಾರಣಕ್ಕೆ ನಿವೃತ್ತಿ ಘೋಷಿಸಿರುವ ರೆಬಲ್ ಸ್ಟಾರ್ ಅಂಬರೀಶ್
ರಾಜ್ಯ ವಿಧಾನ ಸಭಾ ಚುನಾವಣಾ ಹಿನ್ನಲೆಯಲ್ಲಿ ಸಕ್ರೀಯ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿರುವ ಶಾಸಕ ಅಂಬರೀಶ್ ಅವರು ಯಾವುದೇ ಕಾರಣಕ್ಕೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಎಲ್ಲವನ್ನು ಯೋಚಿಸಿಯೇ ನಿರ್ಧಾರ ಕೈಗೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅಂಬರೀಶ್ "ನನಗೆ 66 ವರ್ಷ ವಯಸ್ಸಾಗಿದೆ. ಇನ್ನು ರಾಜಕೀಯದಲ್ಲಿ ಮುಂದುವರಿಯುವುದಿಲ್ಲ. ನನ್ನ ಆರೋಗ್ಯ ಬೇರೆ ಸರಿ ಇಲ್ಲ. ಹಾಗಾಗಿ ಇದೇ ಕಾರಣದಿಂದಾಗಿ ಪ್ರಚಾರಕ್ಕೆ ಹೋಗುವುದಿಲ್ಲ. ಮಂಡ್ಯದಲ್ಲಿ ನಾನಿಲ್ಲದಿದ್ದರೆ ಏನು ಇನ್ನೊಬ್ಬ ನಾಯಕ ಹುಟ್ಟಿಕೊಳ್ಳುತ್ತಾನೆ ''ಎಂದು ಅಂಬರೀಶ್ ಆವೇಳೆ ಸ್ಪಷ್ಟಪಡಿಸಿದರು.ಮಂಡ್ಯ ಕ್ಷೇತ್ರಕ್ಕೆ ನನ್ನ ಬದಲಿಗೆ ಕಾಂಗ್ರೆಸ್ ಹೈಕಮಾಂಡ್ ಗೆ ಯಾರ ಹೆಸರನ್ನೂ ಸೂಚಿಸಿಲ್ಲ. ಒಂದು ವೇಳೆ ಹೆಸರು ಸೂಚಿಸಿದರೆ ಅವರನ್ನು ಗೆಲ್ಲಿಸುವ ಜವಾಬ್ದಾರಿ ಕೂಡ ಹೊತ್ತುಕೊಳ್ಳಬೇಕಾಗುತ್ತದೆ ಎಂದರು.ಮಂಡ್ಯದ ಗಂಡು ಯಾರೆಂದು ಈಗಾಗಲೇ ತೋರಿಸಿದ್ದೇನೆ.. ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಬಾದಾಮಿಗೆ ಹೋಗಿರುವುದು ತೃಪ್ತಿ ತಂದಿಲ್ಲ. ಅವರು ಸಿಎಂ ಆಗುವಲ್ಲಿ ನನ್ನ ಪಾತ್ರವೂ ಇದೆ ಎಂದು ಅಂಬರೀಶ್ ಅವರು ಅಭಿಪ್ರಾಯಪಟ್ಟರು.
Comments