ಅಷ್ಟಕ್ಕೂ ಸಿ.ಎಂ ಸಿದ್ದರಾಮಯ್ಯ ತನ್ನ ಮಗನ ಬಗ್ಗೆ ಹೇಳಿದ್ದೇನು?

ರಾಜ್ಯ ವಿಧಾನಸಭಾ ಚುನಾವಣೆಗೆ ಈಗಾಗಲೇ ಅಖಾಡ ಸಿದ್ದವಾಗಿದ್ದು ಬಹುತೇಕ ಎಲ್ಲಾ ಪಕ್ಷಗಳ ಟಿಕೆಟ್ ಈಗಾಗಲೇ ಘೋಷಣೆಯಾಗಿದೆ.
ವರುಣಾ ಕ್ಷೇತ್ರದಲ್ಲಿ ತಮ್ಮ ಪುತ್ರ ಡಾ. ಯತೀಂದ್ರ ವಿರುದ್ಧ ಯಾರೇ ನಿಂತರೂ ಅವರಿಗೆ ಸೋಲು ಗ್ಯಾರಂಟಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಬಿಎಸ್ ವೈ ಪುತ್ರ ಬಿ ವೈ ವಿಜಯೇಂದ್ರ ಸ್ಪರ್ಧೆ ಬಗ್ಗೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ಇನ್ನು ಬಾದಾಮಿ ಕ್ಷೇತ್ರದಲ್ಲಿ ತಮ್ಮ ವಿರುದ್ಧ ಶ್ರೀರಾಮುಲು ಕಣಕ್ಕಿಳಿಯುತ್ತಿರುವುದರ ಬಗ್ಗೆಯೂ ಕೂಡ ಲೇವಡಿ ಮಾಡಿರುವ ಅವರು 'ಯಾರ್ರೀ ಅದು ಶ್ರೀರಾಮುಲು? ಎಷ್ಟು ವರ್ಷ ಚುನಾವಣೆಯ ಅನುಭವ ಅವರಿಗಿದೆ?' ಎಂದು ಪ್ರಶ್ನೆಯನ್ನು ಕೂಡ ಮಾಡಿದ್ದಾರೆ.
Comments