ಜಗ್ಗೇಶ್ ಅವರ ಭಾಗ್ಯ ನೋಡಿ ಹೇಗಿದೆ ಅಂತ..!
ನವರಸ ನಾಯಕ ಜಗ್ಗೇಶ್ ಅವರಿಗೆ ಬಿಜೆಪಿಯಿಂದ ಟಿಕೆಟ್ ಸಿಕ್ಕಿರುವುದು ಎಲ್ಲರಿಗೂ ಕೂಡ ತಿಳಿದಿರುವ ವಿಷಯವೇ. ಬಿಜೆಪಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಜಗ್ಗೇಶ್ ಯಶವಂತಪುರದಿಂದ ಸ್ಪರ್ಧೆ ಮಾಡುತ್ತಿರುವುದು ಅಧಿಕೃತವಾಗಿ ಈಗಾಗಲೇ ಘೋಷಣೆಯಾಗಿದೆ.
ಇದು ಸ್ವತಃ ಜಗ್ಗೇಶ್ ಅವರೇ ಹೇಳುವ ರೀತಿಯಲ್ಲಿ ಬಯಸದೇ ಬಂದ ಭಾಗ್ಯ ಎನ್ನಬಹುದು. ಯಾಕಂದ್ರೆ, ಜಗ್ಗೇಶ್ ಅವರು ಸಾರ್ವಜನಿಕವಾಗಿ ಎಲ್ಲಿಯೂ ನಾನು ಈ ಕ್ಷೇತ್ರದ ಟಿಕೆಟ್ ಆಕಾಂಕ್ಷಿ, ನನಗೆ ಈ ಕ್ಷೇತ್ರದ ಟಿಕೆಟ್ ಬೇಕು ಎಂದು ಕೇಳಿಲ್ಲ. ಆದ್ರೆ, ರಾಜಕೀಯ ಲೆಕ್ಕಾಚಾರಗಳಲ್ಲಿ ಜಗ್ಗೇಶ್ ಅವರಿಗೆ ಟಿಕೆಟ್ ಸಿಕ್ಕಿದೆ ಎಂದರೆ ಸ್ವತಹ ಜಗ್ಗೇಶ್ ಅವರಿಗೆ ಆಶ್ಚರ್ಯವಾಗಬಹುದು. ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾದ ಇಂದು (ಏಪ್ರಿಲ್ 24) ಭಾರತ್ ನಗರದಲ್ಲಿ ಮಧ್ಯಾಹ್ನ 12.30ಕ್ಕೆ ನಟ ಜಗ್ಗೇಶ್ ನಾಮಪತ್ರವನ್ನು ಸಲ್ಲಿಸಲಿದ್ದಾರೆ. ಎಸ್… ಜಗ್ಗೇಶ್ ಅವರು ಮೊದಲೆ ನಟಸಾರ್ವಭೌಮ ಡಾ ರಾಜ್ ಕುಮಾರ್ ಅವರ ಅಭಿಮಾನಿ. ಅದು ಅಲ್ಲದೆ ಇಂದು ಅಣ್ಣಾವ್ರ ಹುಟ್ಟುಹಬ್ಬ. ರಾಜ್ ಅವರನ್ನ ತಮ್ಮ ಆರಾಧ್ಯ ದೈವ ಎಂದೇ ಹೇಳಿಕೊಳ್ಳುವ ಜಗ್ಗೇಶ್ ಅವರು, ಅವರ ಹುಟ್ಟುಹಬ್ಬದಂದೇ ಚುನಾವಣ ಕಣಕ್ಕೆ ಇಳಿಯುತ್ತಿರುವುದ ವಿಶೇಷ. ಹೀಗಾಗಿ, ಟಿಕೆಟ್ ಸಿಕ್ಕಿದ್ದು ಮತ್ತು ನಾಮಪತ್ರ ಸಲ್ಲಿಸುತ್ತಿರುವುದು ಜಗ್ಗೇಶ್ ಅವರ ಪಾಲಿಗೆ ಖುಷಿ ಕೊಟ್ಟಿದೆಯಂತೆ.
Comments