ಸಿಎಂ ಪರ ಕಿಚ್ಚ ಸುದೀಪ್ ಪ್ರಚಾರ ಮಾಡುತ್ತಾರಾ?

ನನ್ನ ಹಾಗೂ ಸುದೀಪ್ ಅವರ ಭೇಟಿಯಾದ ಸಂದರ್ಭದಲ್ಲಿ ನಿಮಗೆ ಒಬ್ಬರಿಗೆ ಪ್ರಚಾರಕ್ಕೆ ಬರುತ್ತೇನೆ ಎಂದು ನಟ ಕಿಚ್ಚ ಸುದೀಪ್ ಹೇಳಿದ್ದರು. ಆದರೆ ನಾನು ಅವರಿಗೆ ಇನ್ನೂ ಏನು ಕೂಡ ಹೇಳಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ಇಂದು ವರುಣಾ ಕ್ಷೇತ್ರದ ಪ್ರಚಾರಕ್ಕೆ ಹೋಗುವ ಮೊದಲು ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸ್ಟಾರ್ ಪ್ರಚಾರಕರು ಯಾರು ಬರುತ್ತಾರೆ ಎಂಬ ಪ್ರಶ್ನೆಯ ಸಲುವಾಗಿ ನಟ ಸುದೀಪ್ ನನ್ನನ್ನು ಭೇಟಿಯಾಗಲು ಬಂದಿದ್ದರು. ಆ ಸಂದರ್ಭದಲ್ಲಿ ನಿಮ್ಮೊಬ್ಬರಿಗೆ ಪ್ರಚಾರಕ್ಕೆ ಬರುತ್ತೇನೆಂದು ಸುದೀಪ್ ಅವರೇ ಹೇಳಿದ್ದರು. ಆದರೆ ಈ ಬಗ್ಗೆ ನಾನು ಅವರಿಗೆ ಇನ್ನೂ ಏನನ್ನೂ ಸ್ಪಷ್ಟ ಪಡಿಸಿಲ್ಲ ಎಂದರು. ಅವರ ಕ್ಷೇತ್ರದಲ್ಲಿ ಅವರೇ ಸ್ಟಾರ್ ಪ್ರಚಾರಕರಾಗಿ ಕೆಲಸ ಮಾಡುತ್ತಾರೆ ಎಂದು ತಿಳಿಸಿದ ಸಿಎಂ, ಬಾದಾಮಿಗೆ ನಾನು ನಾಳೆ ನಾಮಪತ್ರ ಸಲ್ಲಿಸುತ್ತೇನೆ. ಒಂದು ದಿನ ಮಾತ್ರ ಪ್ರಚಾರಕ್ಕೆ ಹೋಗುತ್ತೇನೆ. ಉಳಿದಂತೆ ಆ ಕ್ಷೇತ್ರದ ನಾಯಕರು ಪ್ರಚಾರ ಮಾಡುತ್ತಾರೆ ಎಂದು ಈ ಮೂಲಕ ತಿಳಿಸಿದ್ದಾರೆ
Comments