ಯಶವಂತಪುರ ಕ್ಷೇತ್ರದ ಬಿಜೆಪಿ ಸ್ಪರ್ಧಿ ಯಾರು ಗೊತ್ತಾ?

ನವರಸ ನಾಯಕ ಜಗ್ಗೇಶ್ ಅವರು ಮತ್ತೊಮ್ಮೆ ಸಕ್ರಿಯವಾಗಿ ರಾಜಕಾರಣಿಯಾಗಲು ಮುಂದಾಗಿದ್ದಾರೆ. ಜಗ್ಗೇಶ್ ಅವರ ಜನಪ್ರಿಯತೆಗೆ ಬೆಲೆಕೊಟ್ಟಿರುವ ಬಿಜೆಪಿ ಹೈಕಮಾಂಡ್, ಅವರಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಸೂಚನೆಯನ್ನು ನೀಡಿದೆ. ಸೋಮವಾರದಂದು ಪ್ರಕಟವಾದ ಬಿಜೆಪಿ ಪಕ್ಷದ 4ನೇ ಪಟ್ಟಿಯಲ್ಲಿ ಜಗ್ಗೇಶ್ ಹೆಸರು ಕೂಡ ಕಾಣಿಸಿಕೊಂಡಿದೆ.
ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಜಗ್ಗೇಶ್ ಸ್ಪರ್ಧಿಸುವುದು ಬಹುಪಾಲು ಖಚಿತವಾಗಿದೆ. ಈ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಜವರೇಗೌಡ ಹಾಗೂ ಕಾಂಗ್ರೆಸ್ಸಿನಿಂದ ಎಸ್. ಟಿ ಸೋಮಶೇಖರ್ ಅವರು ಕಣಕ್ಕೆ ಇಳಿಯಲಿದ್ದಾರೆ. ಬಿಜೆಪಿ ನಾಲ್ಕನೇ ಪಟ್ಟಿಯಲ್ಲಿ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಈಗಾಗಲೇ ಘೋಷಿಸಲಾಗಿದ್ದು, ಇನ್ನೂ ನಾಲ್ಕು ಕ್ಷೇತ್ರಗಳನ್ನು ಬಾಕಿಯನ್ನು ಉಳಿಸಿಕೊಳ್ಳಲಾಗಿದೆ. ಯಶವಂತಪುರ ಕ್ಷೇತ್ರದಿಂದ ಮತ್ತೊಮ್ಮೆ ಶೋಭಾ ಕರಂದ್ಲಾಜೆ ಅವರು ಸ್ಪರ್ಧಿಸುತ್ತಾರೆ ಎಂಬ ಸುದ್ದಿಯು ಹಬ್ಬಿತ್ತು. ಆದರೆ, ಶೋಭಾ ಅವರು ಸ್ಪರ್ಧಿಸಲು ಹಿಂದೇಟು ಹಾಕಿದ ಕಾರಣ, ಜನಪ್ರಿಯತೆ ಆಧಾರದ ಮೇಲೆ ಜಗ್ಗೇಶ್ ಅವರಿಗೆ ಟಿಕೆಟ್ ಸಿಕ್ಕಿದೆ.
Comments