ವಿಧಾನಸಭಾ ಚುನಾವಣೆ : ಕಾಂಗ್ರೆಸ್ ಅಂತಿಮ ಪಟ್ಟಿ ಪ್ರಕಟ

ರಾಜ್ಯ ವಿಧಾನಸಭೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಕಾಂಗ್ರೆಸ್ ಅಂತಿಮ ಪಟ್ಟಿ ಇಂದು ಪ್ರಕಟವಾಗಿದೆ. ಪಟ್ಟಿಯಲ್ಲಿರುವ ಪ್ರಕಾರ ಸಿಎಂ ಸಿದ್ದರಾಮಯ್ಯ (ಬದಾಮಿ), ಕೆ.ಪಿ. ಚಂದ್ರಕಲಾ (ಮಡಿಕೇರಿ), ಎಂ. ಶ್ರೀನಿವಾಸ್ (ಪದ್ಮನಾಭನಗರ), ಎನ್.ಎ. ಹ್ಯಾರಿಸ್ (ಶಾಂತಿನಗರ), ಕೆಂಗಲ್ ಶ್ರೀಪಾದ ರೇಣು (ಮಲ್ಲೇಶ್ವರ), ಕೆ. ಷಡಕ್ಷರಿ (ತಿಪಟೂರು), ಹೆಚ್.ಪಿ. ರಾಜೇಶ್ (ಜಗಳೂರು), ಸೈಯದ್ ಯಾಸಿನ್ (ರಾಯಚೂರು), ಮಲ್ಲಣ್ಣ ನಿಂಗಣ್ಣಸಾಲಿ (ಸಿಂದಗಿ), ವಿಠ್ಠಲ್ ಕಟಕದೊಂಡ (ನಾಗಠಾಣ), ಡಿ.ಬಿ. ಇನಾಮ್‍ದಾರ್ (ಕಿತ್ತೂರು) ವಿಧಾನಸಭೆ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿದ್ದಾರೆ.
ಅಭ್ಯರ್ಥಿ ಬದಲಾವಣೆ: ಕಾಂಗ್ರೆಸ್ ಅಂತಿಮ ಪಟ್ಟಿಯಲ್ಲಿ ಕೆಲ ಅಭ್ಯರ್ಥಿಗಳ ಬದಲಾವಣೆ ಆಗಿದೆ. ಮಲ್ಲೇಶ್ವರದಲ್ಲಿ ಸಚಿವ ಎಂ.ಆರ್.ಸೀತಾರಾಮ್ ಬದಲು ಶ್ರೀಪಾದ್ ರೇಣು, ಮಡಿಕೇರಿಯಲ್ಲಿ ಚಂದ್ರಮೌಳಿ ಬದಲು ಚಂದ್ರಕಲಾಗೆ ಟಿಕೆಟ್ ಸಿಕ್ಕಿದೆ. ತಿಪಟೂರಿನಲ್ಲಿ ನಂಜಾಮರಿ ಬದಲು ಕೆ.ಷಡಕ್ಷರಿಗೆ, ಪದ್ಮನಾಭನಗರದಲ್ಲಿ ಗುರಪ್ಪ ನಾಯ್ಡು ಬದಲು ಎಂ.ಶ್ರೀನಿವಾಸ್ ಹಾಗೂ ಜಗಳೂರಿನಲ್ಲಿ ಎ.ಪುಷ್ಪಾ ಬದಲು ಹೆಚ್.ಪಿ. ರಾಜೇಶ್‌ಗೆ ಟಿಕೆಟ್ ನೀಡಲಾಗಿದೆ.
Comments