ರಾಜ್ಯದ ಶ್ರೀಮಂತ ಅಭ್ಯರ್ಥಿ ಯಾರು?

ರಾಜ್ಯ ವಿಧಾನಸಭೆ ಚುನಾವಣಾ ನಾಮಪತ್ರ ಸಲ್ಲಿಸಲು ತಮ್ಮ ಎಲ್ಲಾ ಆಸ್ತಿ ವಿವರಗಳನ್ನು ಕೊಡುವುದು ಎಲ್ಲರಿಗೂ ಗೊತ್ತಿರುವ ವಿಷಯವೇಆದರೆ ಈ ಮೂಲಕ ಯಾರು ಎಷ್ಟು ಶ್ರೀಮಂತರು ಎಂಬುದು ಗೊತ್ತಾಗುತ್ತದೆ.
ಚುನಾವಣಾ ಕಣದಲ್ಲಿ ಕೋಟ್ಯಾಂತರ ಹಣ ಹೊಂದಿರುವ ಅಭ್ಯರ್ಥಿಗಳು ಕಣಕ್ಕೆ ಇಳಿಯುತ್ತಿದ್ದಾರೆ. ಈ ನಡುವೆ ಶಾಸಕ ಪ್ರಿಯಕೃಷ್ಣ ಅವರು ತಮ್ಮ ನಾಮಪತ್ರ ಸಲ್ಲಿಸುವ ವೇಳೆಯಲ್ಲಿ ತನ್ನ ಬಳಿ ಒಂದು ಸಾವಿರದ ಇಪ್ಪತ್ತು ಲಕ್ಷ ಕೋಟಿ ರೂ. ಇದೆ ಎಂದು ಘೋಷಿಸಿದ್ದಾರೆ.ಶಾಸಕ ಪ್ರಿಯಕೃಷ್ಣ ಅವರ ಸಾವಿರ ಕೋಟಿ ಆಸ್ತಿಯಲ್ಲಿ ಚರಾಸ್ತಿ 860 ಕೋಟಿ ರೂ. ಮತ್ತು ಸ್ಥಿರಾಸ್ತಿ 160 ಕೋಟಿ ರೂ ಆಗಿದೆ. ಆದರೆ ಇದರ ನಡುವೆ ಪ್ರಿಯಾಕೃಷ್ಣ ಬರೋಬ್ಬರಿ 802 ಕೋಟಿ ರೂ.ಸಾಲ ಇರುವುದಾಗಿ ಹೇಳಿದ್ದಾರೆ. 39 ಲಕ್ಷ 65 ಸಾವಿರ 368 ರೂ. ಮೌಲ್ಯದ 1,406 ಗ್ರಾಂ ಚಿನ್ನ, ಆಡಿ, ಬೆಂಝ್, ಪಜೇರೋ ಸ್ಪೋರ್ಟ್ಸ್ ಸೇರಿ 15ಕ್ಕೂ ಹೆಚ್ಚು ಐಷಾರಾಮಿ ವಾಹನಗಳು ಪ್ರಿಯಕೃಷ್ಣ ಹೊಂದಿದ್ದಾರಂತೆ. ನಾಮಪತ್ರಸಲ್ಲಿಸಿರುವ ಅಭ್ಯರ್ಥಿಗಳಲ್ಲಿ ಅತಿಹೆಚ್ಚು ಆಸ್ತಿಹೊಂದಿರುವ ಅಭ್ಯರ್ಥಿಗಳಪಟ್ಟಿಯಲ್ಲಿ ಶಾಸಕ ಪ್ರಿಯಕೃಷ್ಣ ಅವರು ಮೊದಲನೆ ಸ್ಥಾನಪಡೆದುಕೊಂಡಿದ್ದಾರಂತೆ.
Comments