ಜಗ್ಗೇಶ್ ಗೆ ಟಿಕೇಟ್ ಸಿಗದ ಬಗ್ಗೆ ಬೇಸರವಿದೆಯಾ?

21 Apr 2018 2:32 PM | Politics
871 Report

ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ  ಟಿಕೇಟ್ ಪಟ್ಟಿಗಳು ಈಗಾಗಲೇ ಬಿಡುಗಡೆಯಾಗಿವೆ. ನವರಸನಾಯಕ ಜಗ್ಗೇಶ್ ಗೆ ಈ ಬಾರಿ ವಿಧಾನಸಭೆ ಚುನಾವಣೆಗೆ ಟಿಕೆಟ್ ಸಿಗಲಿಲ್ಲವೆಂದು ಬೇಸರವಾಗಿರುವ  ಬಗ್ಗೆ ಅವರು ಟ್ವಿಟರ್ ನಲ್ಲಿ ನೀಡಿರುವ ಸಂದೇಶ ಹಲವು ಅನುಮಾನಗಳನ್ನು ಹುಟ್ಟುಹಾಕುವಂತಿವೆ.

ಅಷ್ಟೆ ಅಲ್ಲದೆ ನನಗೆ ರಾಜಕೀಯದಲ್ಲಿ ಒಲವು ಇಲ್ಲ ಎಂಬುದನ್ನು ತಿಳಿಸಿದ್ದಾರೆ. 'ನನ್ನ ಜೀವನ ಸುಮಧುರವಾಗಿದೆ. ನಾನು ಅಧಿಕಾರಶಾಹಿ ರಾಜಕಾರಣಿಯಲ್ಲ. ನನಗೆ ಸಿಗುವುದರಲ್ಲಿ ತೃಪ್ತಿಯಿದೆ. ನನ್ನ ವೃತ್ತಿಯಲ್ಲಿ 2019 ರವರೆಗೆ ನಾನು ತುಂಬಾ ಬ್ಯುಸಿ. ಸಿನಿಮಾ, ಟಿವಿ ಶೋಗಳು, ಎರಡು ದೇವಾಲಯಗಳ ನಿರ್ಮಾಣ ಸೇರಿದಂತೆ ನಾನು ಬ್ಯುಸಿ. ನಾನು ನಗುತ್ತಾ ಬೇರೆಯವರನ್ನು ನಗಿಸುತ್ತಿದ್ದೇನೆ' ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ಆ ಮೂಲಕ ಸಿಕ್ಕಿದರಲ್ಲೇ ಖುಷಿಪಡುವುದಾಗಿ ನವರಸ ನಾಯಕ ಜಗ್ಗೇಶ್ ತಿಳಿಸಿದ್ದಾರೆ. 

Edited By

Manjula M

Reported By

Manjula M

Comments