ಕುಮಾರ್ ಬಂಗಾರಪ್ಪನ ಒಟ್ಟಾರೆ ಆಸ್ತಿ ಎಷ್ಟು ಗೊತ್ತಾ?
ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ನಾಮಪತ್ರ ಸಲ್ಲಿಸಲು ತಮ್ಮ ತಮ್ ಆಸ್ತಿ ವಿವರವನ್ನು ನೀಡುವುದು ಕಡ್ಡಾಯವಾಗಿದೆ. ಈ ಹಿನ್ನಲೆಯಲ್ಲು ಸೊರಬ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಕುಮಾರಬಂಗಾರಪ್ಪ ತಮ್ಮ ಆಸ್ತಿ ವಿವರವನ್ನು ನೀಡಿದ್ದಾರೆ.
ಅಫಿಡವಿಟ್ ನಲ್ಲಿ ಅವರು ಘೊಷಿಸಿರುವ ಆಸ್ತಿ ವಿವರದ ಪ್ರಕಾರ ಅವರ ಆಸ್ತಿ 25 ಕೋಟಿಗೆ ಹೆಚ್ಚಾಗಿದೆ. 2013 ರ ಚುನಾವಣೆ ವೇಳೆ ಅವರು 16.44 ಕೋಟಿ ಆಸ್ತಿ ಘೋಷಣೆ ಮಾಡಿದ್ದರು. ಇದೀಗ ಅವರೇ 25.68 ಕೋಟಿ ಆಸ್ತಿ ಘೋಷಣೆ ಮಾಡಿದ್ದಾರೆ. ಸೊರಬ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕುಮಾರ್ ಬಂಗಾರಪ್ಪ ಬಳಿ 15 ಲಕ್ಷ ನಗದು, 3.86 ಲಕ್ಷ ಬ್ಯಾಂಕ್ ಠೇವಣಿ, 1.49 ಕೋಟಿ ಚರಾಸ್ತಿ ಸೇರಿದಂತೆ 25.68 ಕೋಟಿ ಆಸ್ತಿ ಹೊಂದಿದ್ದಾರೆ. ಈ ಪೈಕಿ 1.12 ಕೋಟಿ ಸಾಲವನ್ನು ಮಾಡಿದ್ದಾರಂತೆ. ಇನ್ನು ಪತ್ನಿ ವಿದ್ಯುಲತಾ ವಾರ್ಷಿಕ ಆದಾಯ 13.30 ಲಕ್ಷ ಆಗಿದ್ದು, ಒಂದು ಲಕ್ಷ ನಗದು, 2.18 ಲಕ್ಷ, ಬ್ಯಾಂಕ್ ಠೇವಣಿ, 49.30 ಲಕ್ಷ ಚರಾಸ್ತಿ, 3500 ಗ್ರಾಮ್ ಬಂಗಾರವನ್ನು ಹೊಂದಿದ್ದಾರೆ.
Comments