ಚುನಾವಣೆ ಪೂರ್ವ ಸಮೀಕ್ಷೆ ಮಾಡಿಸಿದ್ದು ನಾನೆ ಎಂದು ಹೇಳಿದ ಸಿ.ಎಂ ಸಿದ್ದರಾಮಯ್ಯ
ಸಮ್ಮಿಶ್ರ ಸರ್ಕಾರ ರಚನೆಯಾಗುತ್ತದೆಂಬ ಸರ್ವೇ ವರದಿ ವಿಚಾರ ಕೇವಲ ಜೆಡಿಎಸ್ ಪಕ್ಷದವರ ಭ್ರಮೆಯಾಗಿದೆ. ನಾವು ಕೂಡ ಚುನಾವಣೆ ಸಂಬಂಧ 3 ಸರ್ವೇಯನ್ನು ಮಾಡಿಸಿದ್ದೇವೆ. ಎಲ್ಲದರಲ್ಲೂ ನಾವೇ ಅಧಿಕಾರಕ್ಕೆ ಬರುತ್ತೇವೆಂದು ವರದಿ ಬಂದಿದೆ ಎಂದು ಸಿ,ಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಅವರು ಇಂದು ಮೈಸೂರು ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಇಲ್ಲ. ಬಿಜೆಪಿಯವರು ಇಲ್ಲಸಲ್ಲದ ಆರೋಪಗಳಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ಬಿಜೆಪಿ ಪಕ್ಷದ ವಿರುದ್ದ ಹರಿಹಾಯ್ದರು. ಸಿದ್ದರಾಮಯ್ಯ ಹಿಂದು ವಿರೋಧಿ ಅನ್ನುವ ಅಮಿತ್ ಷಾ ಹಿಂದುವಲ್ಲ. ಮನುಷ್ಯತ್ವ ಮಾನವೀಯ ಮೌಲ್ಯಗಳಲ್ಲಿ ನಂಬಿಕೆ ಇರೋ ನಾನು ಇವರಿಗಿಂತ ಉತ್ತಮ. ಹೆಣದ ಮೇಲೆ ರಾಜಕೀಯ ಮಾಡುವುದು ನಮಗೆ ಗೊತ್ತಿಲ್ಲ ಎಂದು ಸಿದ್ದರಾಮಯ್ಯನವರು ಕಿಡಿಕಾರಿದರು.
Comments