ಈ ಬಾರಿಯ ಚುನಾವಣೆಗೆ ಉಪೇಂದ್ರ ಸ್ಪರ್ಧಿಸ್ತಾರಾ?
ಸ್ಯಾಂಡಲ್ ವುಡ್ ನ ಸೂಪರ್ ಸ್ಟಾರ್ ಉಪೆಂದ್ರ ಕಟ್ಟಿದ ಹೊಸ ಪಕ್ಷ ಕೆಪಿಜೆಪಿ. ಆದರೆ ಪಕ್ಷ ಕಟ್ಟಿದ್ದು ಅಷ್ಟೆ ಆದರೆ ಪಕ್ಷದ ಕಹಿ ಅನುಭವದ ನಂತರ ತಮ್ಮದೇ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿ ಹಲವಾರು ದಿನಗಳು ಕಳೆದರೂ ಕೂಡ ನಟ ಉಪೇಂದ್ರ ಯಾವುದೇ ಹೊಸ ಸುದ್ದಿಯನ್ನು ಕೊಟ್ಟಿಲ್ಲ. ಹಾಗಿದ್ದರೆ ಚುನಾವಣೆಯಲ್ಲಿ ಉಪೇಂದ್ರ ಸ್ಪರ್ಧಿಸುತ್ತಾರೋ ಅಥವಾ ಇಲ್ಲವೋ ಎಂಬುದು ದೊಡ್ಡ ಪ್ರಶ್ನೆಯಾಗಿಯೇ ಉಳಿದಿದೆ.
ಮೇ 12 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಉಪೇಂದ್ರ ಮತ್ತು ಅವರ ಪ್ರಜಾಕೀಯ ಪಕ್ಷದಿಂದ ಯಾರೂ ಸ್ಪರ್ಧಿಸಲ್ಲ ಎಂಬ ಸುದ್ದಿಗಳು ಮೂಲಗಳಿಂದ ತಿಳಿದುಬಂದಿದೆ. ಉಪೇಂದ್ರ ಹೊಸ ಪಕ್ಷ ಸ್ಥಾಪನೆ ವಿಚಾರ ಇನ್ನೂ ಆರಂಭದ ಹಂತದಲ್ಲಿದೆಯಷ್ಟೆ. ಇಷ್ಟೊತ್ತಿಗಾಗಲೇ ಪಕ್ಷದಿಂದ ಯಾವ ಅಭ್ಯರ್ಥಿಯಾದರೂ ಕಣಕ್ಕೆ ಇಳಿಯಬೇಕಿತ್ತು. ಆದರೆ ಯಾಕೆ ಯಾರು ಸ್ಪರ್ಧಿಸಿಲ್ಲ ಎನ್ನುವ ಪ್ರಶ್ನೆಯು ಹಾಗೆಯೆ ಉಳಿದಿದೆ. ಆದರೆ ಮುಂದಿನ ತಿಂಗಳಿನಿಂದ ಪಕ್ಷ ಸ್ಥಾಪನೆ, ಸಂಘಟನೆ ಬಗ್ಗೆ ಯೋಜನೆ ರೂಪಿಸಲಿದ್ದೇನೆ. ಮುಂದಿನ ವರ್ಷದ ಚುನಾವಣೆಗೆ ತಯಾರಿಯನ್ನು ನಡೆಸಲಿದ್ದೇನೆ ಎಂದು ಉಪೇಂದ್ರ ಅವರು ಹೇಳಿಕೊಂಡಿದ್ದಾರೆ. ಆ ಮೂಲಕ ನೇರವಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಸುಳಿವನ್ನು ಕೂಡ ಉಪೇಂದ್ರ ನೀಡಿದ್ದಾರೆ.
Comments