ಚುನಾವಣೆಯಲ್ಲಿ ಸ್ಪರ್ಧಿಸಲು ಬಿ ಫಾರ್ಮ್ ಎಷ್ಟು ಮುಖ್ಯ?

ಭಾರತದಲ್ಲಿ ಚುನಾವಣೆಯಲ್ಲಿ ಸ್ಪರ್ದಿಸಲು ಬಹಳಷ್ಟು ಫಾರ್ಮ್ ಗಳನ್ನು ಅಭ್ಯರ್ಥಿಗಳು ಭರ್ತಿ ಮಾಡಲೇಬೇಕಾಗುತ್ತದೆ. ಅವುಗಳಲ್ಲಿ ಬಿ ಫಾರ್ಮ್ ಕೂಡ ಒಂದಾಗಿದೆ.
ಒಂದು ಪ್ರತಿಷ್ಠಿತ ಕ್ಷೇತ್ರದಿಂದ ಈ ಅಭ್ಯರ್ಥಿ ನಮ್ಮ ಪಕ್ಷ ದಿಂದ ಸ್ಪರ್ಧೆ ಮಾಡಲಿದ್ದಾರೆ ಎನ್ನುವುದನ್ನು ಪಕ್ಷದ ಅಧಿಕೃತ ಸದಸ್ಯನ ಸಹಿಯೊಂದಿಗೆ ಪಕ್ಷ ಕೊಡುವಂತಹ ಫಾರ್ಮ್ ಅನ್ನು ಬಿ ಫಾರ್ಮ್ ಎಂದು ಕರೆಯುತ್ತಾರೆ. ನಾಮಪತ್ರದ ಅರ್ಜಿಯಲ್ಲಿ ಪ್ರತಿಷ್ಠಿತ ಪಕ್ಷದಿಂದ ಸ್ಪರ್ಧೆ ಮಾಡುವೆ ಎಂದು ನಮೂದಿಸಿದಲ್ಲಿ ಅಭ್ಯರ್ಥಿಯು ಬಿ ಫಾರ್ಮ್ ಅನ್ನು ಸಲ್ಲಿಸಬೇಕಾಗುತ್ತದೆ. ಯಾವ ಪಕ್ಷದ ಬಿ ಫಾರ್ಮ್ ಪಡೆದು ಅಭ್ಯರ್ಥಿ ಸ್ಪರ್ಧಿಸುತ್ತಾರೋ ಅವರಿಗೆ ಆ ಪಕ್ಷದ ಚಿಹ್ನೆ ಸಿಗುತ್ತದೆ. ಇದು ಬಿ ಫಾರ್ಮ್ ವಿಶೇಷವಾಗಿದೆ.
Comments