ಶಾಂತಿನಗರದ ಟಿಕೇಟ್ ಹ್ಯಾರೀಸ್ ಗೆ ಪಕ್ಕಾ ಆಯ್ತ?
ಈಗಾಗಲೇ ಕಾಂಗ್ರೇಸ್ ಪಟ್ಟಿ ಬಿಡುಗಡೆಗೊಂಡಿದ್ದು ಶಾಂತಿನಗರಕ್ಕೆ ಯಾವ ಅಭ್ಯರ್ಥಿ ಎಂದು ಘೋಷಣೆ ಮಾಡಿರಲಿಲ್ಲ.
ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಇನ್ನೂ ಟಿಕೆಟ್ ಘೋಷಣೆ ಮಾಡದ ಆರು ಕ್ಷೇತ್ರಗಳಲ್ಲಿ ಶಾಂತಿನಗರ ಕೂಡ ಒಂದು, ಆದರೆ ಕೆಲವೊಂದು ಮೂಲಗಳ ಪ್ರಕಾರ, ಶಾಂತಿನಗರಕ್ಕೆ ಎನ್.ಎ. ಹ್ಯಾರಿಸ್ ಹಾಗೂ ರಾಯಚೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಜಾಫರ್ ಷರೀಫ್ ಅವರ ಅಳಿಯ ಹಾಗೂ ಮಾಜಿ ಶಾಸಕ ಸೈಯದ್ ಯಾಸೀನ್ ಅವರ ಹೆಸರು ಸೂಚಿಸಲಾಗಿದೆ. ಶೀಘ್ರದಲ್ಲೇ ಈ ಇಬ್ಬರ ಹೆಸರನ್ನು ಅಧಿಕೃತವಾಗಿ ಕಾಂಗ್ರೇಸ್ ಪಕ್ಷ ಪ್ರಕಟಿಸಲಿದೆ ಎಂದು ಈ ಮೂಲಕ ತಿಳಿಸಿದ್ದಾರೆ.
Comments