ಚುನಾವಣಾ ಆಯೋಗದಿಂದ ನ್ಯೂ ಪ್ಲಾನ್
ರಾಜ್ಯ ವಿಧಾನಸಭೆ ಚುನಾವಣೆಗೆ ಈಗಾಗಲೇ ದಿನಾಂಕ ನಿಗದಿಯಾಗಿದ್ದು ಮೇ. 12 ರಂದು ಚುಣಾವಣೆ ನಡೆಯುತ್ತದೆ. ಚುನಾವಣೆಯನ್ನು ಕಟ್ಟುನಿಟ್ಟಾಗಿ ನಿರ್ವಹಿಸಲು ಪಣ ತೊಟ್ಟಿರುವ ಚುನಾವಣಾ ಆಯೋಗ ಚುನಾವಣಾ ಕಾರ್ಯದಲ್ಲಿರುವ ವಾಹನಗಳಿಗೆ ಜಿಪಿಎಸ್ ಅನ್ನು ಅಳವಡಿಸಿದೆ.
ಚುನಾವಣೆಯ ವೇಳೆಯಲ್ಲಿ ನಡೆಯುವ ಚುನಾವಣಾ ಅಕ್ರಮಗಳ ತಡೆ, ಭದ್ರತೆ ಮತ್ತು ನೀರ್ಭಿತ ಚುನಾವಣೆ ನಡೆಸುವ ನಿಟ್ಟಿನಲ್ಲಿ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ ಎಂದು ತಿಳಿಸಲಾಗಿದೆ. ಚುನಾವಣಾ ಕರ್ತವ್ಯದಲ್ಲಿ ತೊಡಗಿರುವ ವಿಚಕ್ಷಣಾ ದಳ ಮತ್ತಿತರ ವಾಹನಗಳಿಗೆ ಜಿಪಿಎಸ್ ಅನ್ನು ಈಗಾಗಲೇ ಜೋಡಿಸಿದ್ದು, ಅದರ ಮೂಲಕ ವಾಹನಗಳನ್ನು ಟ್ರ್ಯಾಕ್ ಮಾಡಲಾಗುವುದು. ಚುನಾವಣೆಯ ಸಂದರ್ಭದಲ್ಲಿ ಈ ರೀತಿಯ ಬಿಗಿ ಭದ್ರತೆ ಇರುವುದರಿಂದ ಅಕ್ರಮಗಳನ್ನು ತಡೆಯಲು ಸ್ವಲ್ಪ ಮಟ್ಟಿಗಾದರೂ ಸಹಾಯವಾಗುತ್ತದೆ.
Comments