ಎನ್.ಎ ಹ್ಯಾರಿಸ್ ಗೆ ಟಿಕೆಟ್ ಸಿಗುತ್ತಾ?

ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಎಲ್ಲರೂ ಕೂಡ ಟಿಕೆಟ್ ಮನಸ್ತಾಪವನ್ನು ತಂದುಕೊಂಡಿದ್ದಾರೆ. ಈಗಾಗಲೇ ಪಕ್ಷಗಳ ಮೊದಲ ಸುತ್ತಿನ ಪಟ್ಟಿಗಳು ಬಿಡುಗಡೆಗೊಂಡಿದೆ. ನಿನ್ನೆಯಷ್ಷ್ಟೆ ಕಾಂಗ್ರೇಸ್ ಪಟ್ಟಿಯು ಕೂಡ ಬಿಡುಗಡೆಯಾಯಿತು.
ಆದರೆ ಪಟ್ಟಿಯಲ್ಲಿ ಅಂದುಕೊಂಡಂತಹ ಕೆಲವರ ಹೆಸರು ಇಲ್ಲದಿರುವುದು ಕಾಂಗ್ರೇಸ್ ಅಭ್ಯರ್ಥಿಗಳಲ್ಲಿ ಗೊಂದಲವನ್ನು ಉಂಟು ಮಾಡಿದೆ. ಶಾಂತಿನಗರ ಶಾಸಕರಾದ ಎನ್.ಎ.ಹ್ಯಾರಿಸ್ ಗೂ ಕೂಡ ಟಿಕೆಟ್ ನೀಡಿರಲಿಲ್ಲ. ಆದರೆ ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಎರಡು ದಿನಗಳ ಒಳಗಾಗಿ ಟಿಕೆಟ್ ಸಿಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು 218 ಕ್ಷೇತ್ರ ಗಳಿಗೆ ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಂಡಿದೆ. ಇನ್ನೂ 6 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಳ್ಳಲು ಬಾಕಿ ಇದೆ. 2-3 ದಿನಗಳ ಒಳಗಾಗಿಯೇ ಉಳಿದ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.
Comments