ಟಿಕೆಟ್ ವಿಚಾರಕ್ಕೆ ರೆಬೆಲ್ ಆದ ರೆಬೆಲ್ ಸ್ಟಾರ್

ವಿಧಾನ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಕೈ ಟಿಕೆಟ್ ಆಯ್ಕೆ ವಿಚಾರದಲ್ಲಿ ರೆಬಲ್ ಸ್ಟಾರ್ ಮುನಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಮಂಡ್ಯದಲ್ಲಿ ತಮಗೆ ಮಾತ್ರ ಟಿಕೆಟ್ ಕೊಟ್ಟರೆ ಸಾಲದು, ತಮ್ಮ ಬೆಂಬಲಿಗರಿಗೂ ಕೂಡ ಟಿಕೆಟ್ ನೀಡಬೇಕು ಎಂದು ಅಂಬರೀಶ್ ಅವರು ಹೇಳಿದ್ದಾರೆ.
ಶ್ರೀರಂಗಪಟ್ಟಣ, ಕೆ.ಆರ್ ಪೇಟೆ, ಪಾಂಡವಪುರ ದಲ್ಲಿ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿ ಎಂದು ಅಂಬಿ ಕೇಳುತ್ತಿದ್ದಾರೆ. ಶ್ರೀರಂಗಪಟ್ಟಣದಿಂದ ಪುಟ್ಟೇಗೌಡ, ಕೆ.ಆರ್ ಪೇಟೆಯಲ್ಲಿ ಕಿಕ್ಕೇರೆ ಸುರೇಶ್, ಪಾಂಡವಪುರದಲ್ಲಿ ಎಲ್.ಡಿ ರವಿಗೆ ಟಿಕೆಟ್ ನೀಡಬೇಕು ಎಂದು ಅಂಬಿ ಅವರು ಬೇಡಿಕೆ ಇಟ್ಟಿದ್ದಾರೆ. ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಟ್ಟರೆ ಮಾತ್ರ ತಾವು ಮಂಡ್ಯದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಅಂಬರೀಷ್ ಅವರು ತಿಳಿಸಿದ್ದಾರೆ. ಶ್ರೀರಂಗಪಟ್ಟಣದಲ್ಲಿ ರಮೇಶ್ ಬಂಡಿಸಿದ್ದೇಗೌಡ, ಪಾಂಡವಪುರದಲ್ಲಿ ಪುಟ್ಟಣಯ್ಯ ಅವರ ಪುತ್ರನಿಗೆ ಟಿಕೆಟ್ ಫೈನಲ್ ಕೂಡ ಆಗಿದ್ದು, ಕಾಂಗ್ರೆಸ್ ಪಕ್ಷದ ಈ ನಿರ್ಧಾರಕ್ಕೆ ಅಂಬರೀಷ್ ಅವರು ರೆಬಲ್ ಆಗಿದ್ದಾರೆ. ಈ ಸಂಬಂಧ ಅಂಬರೀಷ್ ಜೊತೆ ಸಂಧಾನ ಮಾತುಕತೆ ನಡೆಸಲು ಕಾಂಗ್ರೆಸ್ ಮುಖಂಡರುಗಳು
Comments