ಹಿರಿಯ ರಾಜಕಾರಣಿಗೆ ಬೇಡವಾಯ್ತ ಬಿಜೆಪಿ, ಕಮಲ ಬಿಟ್ಟು ಕೈ ಹಿಡಿಯುತ್ತಾರ..!
ಬಿಜೆಪಿಗೆ ಸೇರ್ಪಡೆಯಾಗಿದ್ದಂತಹ ಹಿರಿಯ ರಾಜಕಾರಣಿಯಾದ ಎಸ್.ಎಂ.ಕೃಷ್ಣ ಅವರು ಮತ್ತೆ ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತಿದ್ದಾರೆ ಎನ್ನುವ ಮಾತೊಂದು ಕೇಳಿ ಬರುತ್ತಿದೆ.
ಬಿಜೆಪಿ ತನ್ನನ್ನು ನಡೆಸಿಕೊಂಡಿರುವುದು ಸೇರಿದಂತೆ, ಹಲವು ವಿಚಾರಗಳಲ್ಲಿ ಅಸಮಾಧಾನ ಹೊಂದಿರುವ ಎಸ್.ಎಂ.ಕೃಷ್ಣ ಅವರನ್ನು ಕಾಂಗ್ರೇಸ್ ಪಕ್ಷಕ್ಕೆ ಮರಳಿ ಕರೆ ತಂದು ಚುನಾವಣಾ ಪ್ರಚಾರದಲ್ಲಿ ಬಳಸಿಕೊಳ್ಳಲು ಕಾಂಗ್ರೆಸ್ ಪಕ್ಷದಲ್ಲಿ ವೇದಿಕೆ ಸಿದ್ದಗೊಂಡಿರುವುದು ಈಗ ಬಹಿರಂಗವಾಗಿದೆ. ಈ ವಿಷಯವಾಗಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮತ್ತು ಸಚಿವ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಮಾತುಕತೆಯೂ ಕೂಡ ಈಗಾಗಲೇ ನಡೆದಿದ್ದು , ಕೃಷ್ಣ ಅವರನ್ನು ಪಕ್ಷಕ್ಕೆ ಮರಳಿ ಕರೆತರಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರ ಅನುಮತಿಯೂ ಪಡೆಯಲಾಗಿದೆ ಎಂಬುದು ತಿಳಿದುಬಂದಿದೆ. ಆದರೆ ಈ ವಿಷಯವಾಗಿ ಎಸ್.ಎಂ.ಕೃಷ್ಣ ಅವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೆ ಮೌನವಾಗಿದ್ದಾರೆ. ಈ ಮೌನವನ್ನು ತೆಗೆದುಹಾಕಿ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ
Comments