ಬ್ರೇಕಿಂಗ್ ನ್ಯೂಸ್ : ಪತ್ರಿಕಾಗೋಷ್ಠಿಯಲ್ಲೇ ವಿಷ ಕುಡಿದ ಮಾಜಿ ಕಾರ್ಪೊರೇಟರ್..!
ಕಾಂಗ್ರೆಸ್ ಮುಖಂಡರಿಂದ ನನಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಮಾಜಿ ಕಾರ್ಪೊರೇಟರ್ ವಿ.ನಾಗರಾಜ್ ಪತ್ರಿಕಾಗೋಷ್ಠಿಯಲ್ಲೇ ವಿಷ ಕುಡಿದಿರುವ ಪ್ರಕರಣ ಪ್ರೆಸ್ಕ್ಲಬ್ನಲ್ಲಿ ನಡೆದಿದೆ.
ವಿಷ ಕುಡಿದು ತೀವ್ರ ಅಸ್ವಸ್ಥರಾಗಿರುವ ವಿ.ನಾಗರಾಜ್ ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಇಂದು ಮಧ್ಯಾಹ್ನ ನಾಗರಾಜ್ ಅವರು ಪ್ರೆಸ್ಕ್ಲಬ್ನಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದರು. ಈ ವೇಳೆ ನನಗೆ ಕಾಂಗ್ರೆಸ್ ಮುಖಂಡರಾದ ದಿನೇಶ್ ಗುಂಡೂರಾವ್ ಹಾಗೂ ಕೆ.ಜೆ.ಜಾರ್ಜ್ ಅವರಿಂದ ಮೋಸವಾಗಿದೆ ಎಂದು ಆರೋಪಿಸಿದ ಅವರು ಮತ ಹಾಕದಂತೆ ಮನವಿ ಮಾಡಿದರು.
Comments