'ರೆಬೆಲ್ ಸ್ಟಾರ್' ರಾಜಕೀಯ ನಡೆಯ ಬಗ್ಗೆ ಸುಳಿವು ಕೊಟ್ಟ ಆಪ್ತ...!!

06 Apr 2018 10:02 AM | Politics
637 Report

ಅಂಬರೀಶ್‌ ಅವರು ಆರೋಗ್ಯದ ಕಾರಣ ನೀಡಿ ಮಂಡ್ಯದಿಂದ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅವರ ಆಪ್ತನ ಹೇಳಿಕೆಗೆ ಮಹತ್ವ ಬಂದಿದೆ.

'ಕಾಂಗ್ರೆಸ್‌ ಶಾಸಕ ಅಂಬರೀಶ್‌ ಶೀಘ್ರದಲ್ಲೇ ಮಂಡ್ಯಕ್ಕೆ ಬರಲಿದ್ದಾರೆ. ಮಂಡ್ಯ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವ ನಿರ್ಧಾರದಿಂದ ಅವರು ಹಿಂದೆ ಸರಿಯುವುದಿಲ್ಲ' ಎಂದು ಬೆಂಬಲಿಗ ಅಮರಾವತಿ ಚಂದ್ರಶೇಖರ್‌ ತಿಳಿಸಿದ್ದಾರೆ. ಈ ಕುರಿತು ಇಂದು ಅಥವಾ ನಾಳೆ ಅಂಬರೀಶ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಚರ್ಚಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ. 'ಕ್ಷೇತ್ರದಲ್ಲಿ ಅಂಬರೀಶ್‌ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಕೈಪಿಡಿಯನ್ನು ಬಿಡುಗಡೆ ಮಾಡುತ್ತೇವೆ. ಅವರು ಆರೋಗ್ಯವಾಗಿದ್ದಾರೆ. ಕ್ಷೇತ್ರದಲ್ಲಿ ಅಂಬಿಗೆ ಪ್ರಬಲ ಪ್ರತಿಸ್ಪರ್ಧಿ ಯಾರೂ ಇಲ್ಲ. ಅವರು ಹೇಳಿದರೆ ಚುನಾವಣೆಯಲ್ಲಿ ನಾನೂ ಸ್ಪರ್ಧಿಸಲು ಸಿದ್ಧನಿದ್ದೇನೆ' ಎಂದರು.

 

 

Edited By

Shruthi G

Reported By

Madhu shree

Comments