ಚುನಾವಣೆಗೆ ಟ್ವಿಸ್ಟ್ ಕೊಡುತ್ತಿರುವ ಕಿಚ್ಚ ನಡೆ...!!

ರಾಜ್ಯದಲ್ಲಿ ಒಂದೆಡೆ ಚುನಾವಣೆಯ ಕಾವೇರುತ್ತಿದ್ದರೆ ಮತ್ತೊಂದೆಡೆ ಗೌಪ್ಯ ಮಾತುಕತೆಗಳೇ ಹೆಚ್ಚುತ್ತಿವೆ. ಏನಪ್ಪಾ ಅಂತೀರಾ ಹೌದು ಇತ್ತೀಚಿಗೆ ನಟ ಸುದೀಪ್ ರವರ ನಡೆ ಎಲ್ಲರಲ್ಲೂ ಕುತೂಹಲಕ್ಕೀಡು ಮಾಡಿದೆ. ಇಂದು ಬೆಳಗ್ಗೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕೆಲಕಾಲ ಮಾತುಕತೆ ನಡೆಸಿದ್ದಾರೆ.
ಮುಖ್ಯಮಂತ್ರಿಯವರ ಅಧಿಕೃತ ನಿವಾಸ ಕಾವೇರಿಯಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸುದೀಪ್ ರಾಜ್ಯ ಚುನಾವಣೆ ಕುರಿತು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಸುದೀಪ್ ಮತ್ತು ಕುಮಾರಸ್ವಾಮಿ ಭೇಟಿ ಕುರಿತೂ ಸಿಎಂ ವಿಚಾರಿಸಿದ್ದಾರೆ ಎನ್ನಲಾಗಿದ್ದು, ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಬೆಂಬಲ ನೀಡುವಂತೆ ವಿಚಾರಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ ಸುದೀಪ್ ಯಾವ ರೀತಿ ಪ್ರತಿಕ್ರಿಯೆ ನೀಡಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ. ಒಟ್ಟಿನಲ್ಲಿ, ಸುದೀಪ್ ಚುನಾವಣೆ ಹೊತ್ತಲ್ಲಿ ಯಾವ ಪಕ್ಷಕ್ಕೆ ಅಥವಾ ಅಭ್ಯರ್ಥಿಗೆ ಬೆಂಬಲ ಸೂಚಿಸುತ್ತಾರೆ ಎನ್ನುವುದನ್ನು ಮಾತ್ರ ಬಿಟ್ಟುಕೊಟ್ಟಿಲ್ಲ.
Comments