ಬರೀಗಾಲಲ್ಲೆ ಪಾದಯಾತ್ರೆ ಮಾಡಿದ ಜೆಡಿಎಸ್ ಕಾರ್ಯಕರ್ತರು

ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿಂದತೆ ಎಲ್ಲಾ ಪಕ್ಷದವರು ಕೂಡ ಎಲ್ಲ ಕಡೆಯಲ್ಲಿಯೂ ಬಿರುಸಿನ ಮತ ಪ್ರಚಾರವನ್ನು ಮಾಡುತ್ತಿದ್ದಾರೆ.
ಆದರೆ ಜೆಡಿಎಸ್ ಕಾರ್ಯಕರ್ತರು ಒಂದು ಹೆಜ್ಜೆ ಮುಂದೆ ಹೋಗಿ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲೇಬೇಕು, ಎಚ್ ಡಿ ಕುಮಾರಸ್ವಾಮಿಯವರು ಮುಖ್ಯ ಮಂತ್ರಿಯಾಗಲೇ ಬೇಕು ಎಂದು ಜೆಡಿಎಸ್ ಕಾರ್ಯಕರ್ತರು ಇಂದಿನಿಂದ ಬೆಂಗಳೂರಿನಿಂದ ಚಾಮುಂಡಿ ಬೆಟ್ಟದವರೆಗೆ ಬರಿಗಾಲಿನಲ್ಲಿ ಪಾದಯಾತ್ರೆಯನ್ನು ಆರಂಭಿಸಿದ್ದಾರೆ. ಜೆಡಿಎಸ್ ನ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿಯಾದ ರಾಕೇಶ್ ಎಂ ದೇಶರ್ಲಾ ನೇತೃತ್ವದ ತಂಡವೊಂದು ಪಾದಯಾತ್ರೆಯನ್ನು ಆರಂಭಿಸಿದೆ.
ಬೆಂಗಳೂರಿನ ಕಮ್ಮನಹಳ್ಳಿ ವೃತ್ತದಿಂದ ಬುಧವಾರ ಆರಂಭವಾದ ಪಾದಯಾತ್ರೆಯು ಮೊದಲು ವಿಧಾನ ಸೌಧವನ್ನು ತಲುಪಿತು. ತದ ನಂತರ ಈ ಪಾದಯಾತ್ರೆ ಮೈಸೂರಿನ ಕಡೆ ಸಾಗಿತು.ಕುಮಾರಸ್ವಾಮಿರವರೆ ಮುಖ್ಯಮಂತ್ರಿಯಾಗಲಿ ಎಂದು ಚಾಮುಂಡೇಶ್ವರಿಗೆ ವಿಶೇಷ ಪೂಜೆಯನ್ನು ಸಲ್ಲಿಸುತ್ತಿದ್ದಾರೆ.
ಜನಮೆಚ್ಚಿದ ಎಚ್ ಡಿ ಕೆ ಯವರು ಇನ್ನೊಮ್ಮೆ ಅಧಿಕಾರಕ್ಕೆ ಬರಲಿ ಎನ್ನುವುದು ಜೆಡಿಎಸ್ ಕಾರ್ಯಕರ್ತರ ಆಶಯವಾಗಿದೆ. ಈ ಬಾರಿ ಎಲ್ಲ ಕ್ಷೇತ್ರಗಳಲ್ಲೂ ಕೂಡ ಜೆಡಿಎಸ್ ಅಭ್ಯರ್ಥಿಗಳೇ ಗೆದ್ದು ಬರಲಿ. ಕುಮಾರಸ್ವಾಮಿಯವರೆ ಮುಖ್ಯಮಂತ್ರಿಯಾಗಲಿ ಅನ್ನೋದು ಎಲ್ಲರ ಆಶಯ..
Comments