ಪೆಟ್ರೋಲ್ ಕೊಟ್ಟು ಮತದಾರರನ್ನು ಸೆಳೆಯುತ್ತಿರುವ ರಾಜಕೀಯ ಪಕ್ಷಗಳು
ಚುನಾವಣೆ ಸಮೀಪಿಸುತ್ತಿರುವಂತೆ ಮತದಾರರಿಗೆ ವಿವಿಧ ಆಮಿಷಗಳನ್ನು ಒಡ್ಡಲು ರಾಜಕಾರಣಿಗಳು ಮುಂದಾಗುತ್ತಿದ್ದಾರೆ. ಅದೇ ರೀತಿ, ಅವರಿಗೆ ಕಡಿವಾಣ ಹಾಕಲು ಚುನಾವಣಾ ಆಯೋಗ ಕೂಡ ಶತಪ್ರಯತ್ನ ಮಾಡುತ್ತಿದೆ.
ಹೀಗಾಗಿ ಹಣ ಹಾಗೂ ಹೆಂಡ ಹಂಚಿದರೆ ಸಿಕ್ಕಿಬೀಳುತ್ತೇವೆ ಎಂದು ಆತಂಕಗೊಂಡಿರುವ ರಾಜಕಾರಣಿಗಳು ಈ ಬಾರಿಯ ಚುನಾವಣೆಯಲ್ಲಿ ಪೆಟ್ರೋಲ್ ಹಂಚಲು ನಿರ್ಧರಿಸಿದ್ದಾರೆ. ಪೆಟ್ರೋಲ್ ಬೆಲೆ ಬಹಳ ದುಬಾರಿಯಾಗಿರುವುದರಿಂದ ಜನರು ಪೆಟ್ರೋಲ್ ಖರೀದಿಸಲು ಕಷ್ಟಪಡುತ್ತಿದ್ದಾರೆ.
ಹೀಗಾಗಿ ಒಬ್ಬೊಬ್ಬರಿಗೂ ನಾಲ್ಕೈದು ಲೀಟರ್ ಪೆಟ್ರೋಲ್ ಹಂಚಿದರೆ ಖುಷಿಯಿಂದ ಮತ ಹಾಕುತ್ತಾರೆ ಎಂಬ ಲೆಕ್ಕಾಚಾರ ರಾಜಕಾರಣಿಗಳದು. ಇದಕ್ಕಾಗಿ ಚುನಾವಣೆ ಮುಗಿಯು ವವರೆಗೆ ಒಂದೊಂದು ಪೆಟ್ರೋಲ್ ಬಂಕ್‌ಗಳನ್ನೇ ಗುತ್ತಿಗೆ ಪಡೆಯಲು ಕೆಲ ಅಭ್ಯರ್ಥಿಗಳು ಮುಂದಾಗಿ ದ್ದಾರೆಂದು ಸುಳ್‌ಸುದ್ದಿ ಮೂಲಗಳು ತಿಳಿಸಿವೆ.
Comments