ಕಿಚ್ಚ ಸುದೀಪ್ ರವರು ಎಚ್ ಡಿಕೆ ಮನೆಗೆ ಭೇಟಿ ಕೊಟ್ಟ ಹಿಂದಿನ ಗುಟ್ಟೇನು...?

02 Apr 2018 1:54 PM | Politics
602 Report

ಕಿಚ್ಚ ಸುದೀಪ್ ಅವರು ಇಂದು ಬೆಳಗ್ಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಮನೆಗೆ ಭೇಟಿ ಕೊಟ್ಡಿದ್ದು, ಕುತೂಹಲ ಮೂಡಿಸಿದೆ. ಚುನಾವಣೆ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್ ಅವರು ಕುಮಾರಸ್ವಾಮಿ ಅವರ ಮನೆಗೆ ಹೋಗಿದ್ದ ವಿಷಯ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.

ಆದರೆ ಕೆಲ ದಿನಗಳ ಹಿಂದೆ ಕಿಚ್ಚ ಸುದೀಪ್ ಮನೆಗೆ ಕುಮಾರಸ್ವಾಮಿ ಅವರು ಭೇಟಿ ನೀಡಿದ್ದರು. ಆದರೆ ಆಗ ಸುಮ್ಮನೆ ಉಭಯ ಕುಶಲೋಪರಿ ಅಷ್ಟೇ ಯಾವುದೇ ರಾಜಕೀಯ ಚರ್ಚೆಯಿಲ್ಲ ಎಂದು ಹೇಳಿದ್ದರು. ಇದೀಗ ಸುದೀಪ್ ಅವರು ಹೆಚ್.ಡಿ.ಕುಮಾರಸ್ವಾಮಿ ಅವರ ಮನೆಗೆ ಹೋಗಿದ್ದು, ರಾಜಕೀಯ ವಲಯದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದೆ.

 

Edited By

Shruthi G

Reported By

Madhu shree

Comments