ರಾಜಕೀಯದ ಬಗ್ಗೆ ಸ್ಪೋಟಕ ಮಾಹಿತಿ ಬಿಚ್ಚಿಡಲಿರುವ ಅಂಬಿ...!
ಈ ಬಾರಿಯ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಬೇಕೋ ಬೇಡವೋ ಎಂಬ ಬಗ್ಗೆ ರೆಬಲ್ ಸ್ಟಾರ್ ಅಂಬರೀಷ್ ಗೊಂದಲದಲ್ಲಿದ್ದು, ಇಂದು ನಿರ್ಧಾರ ಪ್ರಕಟಿಸಲಿದ್ದಾರೆ.
ಈಗಾಗಲೇ ಕಾಂಗ್ರೆಸ್ ನಿಂದ ಅಂಬರೀಷ್ ಗೆ ಮಂಡ್ಯ ಟಿಕೆಟ್ ಪಕ್ಕಾ ಆಗಿದೆ. ಹಾಗಿದ್ದರೂ ತಮಗೆ ವಯಸ್ಸಾಯ್ತು, ಆರೋಗ್ಯ ಸರಿ ಇಲ್ಲ ಎಂದು ಬೆಂಬಲಿಗರ ಸಭೆಯಲ್ಲಿ ಸ್ಪರ್ಧೆ ಬಗ್ಗೆ ಖಚಿತ ನಿರ್ಧಾರ ಹೇಳಿರಲಿಲ್ಲ. ಇಂದು ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದರು. ಅದರಂತೆ ಅಂಬರೀಷ್ ಸ್ಪರ್ಧೆ ಬಗ್ಗೆ ಇಂದು ನಿರ್ಧಾರ ಪ್ರಕಟಿಸಲಿದ್ದಾರೆ. ಈಗಾಗಲೇ ಮಂಡ್ಯ ಕ್ಷೇತ್ರದ ಟಿಕೆಟ್ ಗಾಗಿ ಕಾಂಗ್ರೆಸ್ ನಲ್ಲಿ ಭಾರೀ ಪೈಪೋಟಿಯಿದೆ. ಹೀಗಾಗಿ ಅಂಬರೀಷ್ ನಿರ್ಧಾರ ಮಹತ್ವ ಪಡೆದುಕೊಂಡಿದೆ.
Comments