ಜನತೆಯ ಬಳಿ ಕ್ಷೆಮೆಯಾಚಿಸಿದ ಅಮಿತ್ ಶಾ..?

31 Mar 2018 6:10 PM | Politics
1068 Report

ಅಮಿತ್ ಶಾ ಇಂದು ನಗರದ ವಿಶ್ವೇಶರಯ್ಯ ಕ್ರೀಡಾಂಗಣದಲ್ಲಿ ಸಾವಯವ ಕೃಷಿಕರು, ರೈತ ಮಹಿಳೆಯರ ಜೊತೆ ಅಮಿತ್ ಶಾ ಅವರ ಸಂವಾದವನ್ನು ಏರ್ಪಡಿಸಲಾಗಿತ್ತು. ಆದ್ರೆ ಈ ಕಾರ್ಯಕ್ರಮಕ್ಕೆ ಶಾ ತಡವಾಗಿ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಜನರಲ್ಲಿ ಕ್ಷಮೆ ಕೇಳಿದ್ದಾರೆ.

ಇದೇ ವೇಳೆ ಕಾರ್ಯಮವನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾಕಾಂಗ್ರೆಸ್ ಸರ್ಕಾರ ಫಸಲ್ ಭಿಮಾ ಯೋಜನೆ 6162 ಕೋಟಿ ಕೊಟ್ಟರೆ, ಮೋದಿ ಸರ್ಕಾರ 22, 662 ಕೋಟಿ ಕೊಟ್ಟಿದೆ. ಕೃಷಿ ಯಾಂತ್ರಿಕರಣಕ್ಕೆ 2400 ಕೋಟಿ ಬಿಡುಗಡೆ ಮಾಡಿದ್ದೇವೆ. ಮಳೆ ಬೇಸಾಯದ ಅಭಿವೃದ್ಧಿಗಾಗಿ 1322 ಕೋಟಿ ಹಾಗೂ ಡೈರಿ ವಿಕಾಸಕ್ಕೆ 10725 ಕೋಟಿ ಬಿಡುಗಡೆ ಮಾಡಿದ್ದೇವೆ. ಯಡಿಯೂರಪ್ಪ ಸರ್ಕಾರ ಬಂದಲ್ಲಿ ಎಲ್ಲಾ ಸಾವಯವ ಉತ್ಪನ್ನ ಮಾರುಕಟ್ಟೆ ಮಾಡಲಾಗುವುದು ಎಂದರು.

 

Edited By

Shruthi G

Reported By

Madhu shree

Comments