ಚುನಾವಣೆ ಲಾಭಕ್ಕಾಗಿ ರಾಯಚೂರು ವಿವಿಗೆ ಅಸಾದಿ ನೇಮಕ

ಚುನಾವಣೆ ಅನುಕೂಲಕ್ಕಾಗಿ ರಾಯಚೂರು ವಿವಿ ವಿಶೇಷ ಅಧಿಕಾರಿಯಾಗಿ ಮುಜಾಫರ್ ಅಸಾದಿ ಅವರನ್ನು ನೇಮಕ ಮಾಡಲಾಗಿದೆ. ಮುಖ್ಯಮಂತ್ರಿಗಳೇ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡುತ್ತಿದ್ದಾರೆ. ಚುನಾವಣಾ ಆಯೋಗ ಕೂಡಲೇ ಕ್ರಮ ಕೈಗೊಳ್ಳಬೇಕು ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಯುನಿವರ್ಸಿಟಿ ಬಿಲ್ ಆ್ಯಕ್ಟ್ ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ.ಮೈಸೂರು ವಿವಿಯಲ್ಲಿ ಪ್ರೊಫೆಸರ್ ಆಗಿದ್ದ ಮುಜಾಫರ್ ಅಸಾದಿ ಅವರನ್ನು ರಾಐಚೂರು ವಿವಿ ವಿಶೇಷಾಧಿಕಾರಿಯಾಗಿ ನೇಮಕಗೊಳಿಸಿದ್ದು ಕಾನೂನು ಬಾಹಿರ. ಸಿದ್ದರಾಮಯ್ಯನವರು ಚುನಾವಣೆ ಗೆಲ್ಲಲು ಸ್ವಜನ ಪಕ್ಷಪಾತ ಮಾಡುತ್ತಿದ್ದಾರೆ ಎಂದು ಶೆಟ್ಟರ್ ದೂರಿದ್ದಾರೆ. ರೈತರ ಸಾಲಮನ್ನಾ ವಿಚಾರದಲ್ಲಿ 2878 ಕೋಟಿ ಮಾತ್ರ ಸೊಸೈಟಿಗಳಿಗೆ ಪಾವತಿಸಿದ್ದಾರೆ. 5282 ಕೋಟಿ ರೂಪಾಯಿ ಕೊಡುವುದು ಬಾಕಿಯಿದೆ. ನುಡಿದಂತೆ ನಡೆದಿರುವುದಾಗಿ ಸಿದ್ದರಾಮಯ್ಯ ಹೇಳುತ್ತಿರುವುದು ಬೋಗಸ್ . ರೈತರಿಗೆ ಹೊಸ ಸಾಲ ಸಿಗದೆ ತೊಂದರೆಯಾಗಿದೆ. ರಾಜ್ಯ ಸರಕಾರದ ವಿರುದ್ಧ ರೈತರಿಗೆ ಅಸಮಾಧಾನವಿದೆ ಎಂದರು.
ಚುನಾವಣೆ ಸಮಯದಲ್ಲಿ ಅನಿಲ ಭಾಗ್ಯ ಅನುಷ್ಠಾನಕ್ಕೆ ರಾಜ್ಯ ಸರಕಾರ ಪ್ರಯತ್ನ ನಡೆಸಿದ್ದು, ಎಲ್‌ಪಿಜಿ ಸ್ಟವ್ ಕೊಡುವ ಯೋಜನೆ ಜಾರಿಗೆ ಮುಂದಾಗಿದೆ. ಕಾಂಗ್ರೆಸ್‌ಗೆ ಓಟು ಹಾಕುವವರಿಗೆ ಸ್ಟವ್ ಕೊಡಲು ಯತ್ನಿಸುತ್ತಿದ್ದಾರೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಗೋದಾಮಿನಲ್ಲಿ ಸ್ಟವ್‌ಗಳನ್ನು ಸಂಗ್ರಹಿಸಿ ಇಡಲಾಗಿದೆ.ಈ ಕುರಿತು ಚುನಾವಣಾ ಆಯೋಗಕ್ಕೆ ಬಿಜೆಪಿಯಿಂದ ದೂರು ಕೊಡುತ್ತೇವೆ. ಗೋದಾಮು ಜಪ್ತಿ ಮಾಡಿ ತನಿಖೆ ಮಾಡಬೇಕು. ಸಿದ್ದರಾಮಯ್ಯ ಚುನಾವಣೆ ಗೆಲ್ಲಲು ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ ಎಂದು ಹೇಳಿದರು.
Comments