ಮಂಡ್ಯದಿಂದ ಈ ಭಾರಿ ಸುಮಲತ ಅಂಬರೀಷ್ ಚುನಾವಣಾ ಕಣಕ್ಕೆ..?
ಅಂಬರೀಷ್ಗೆ ಅನಾರೋಗ್ಯವಿರುವ ಕಾರಣ ಸುಮಲತಾಗೆ ಟಿಕೆಟ್ ನೀಡಲಾಗುವುದು ಅಂತ ಪಕ್ಷದ ಮೂಲಗಳು ತಿಳಿಸಿದ್ದು. ಇದಕ್ಕೆ ಅಂಬರೀಷ್ ಕೂಡ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದ್ದು, ಇನ್ನೇನು ಬಿಡುಗಡೆಯಾಗಲಿರುವ ರಾಜ್ಯ ಚುನಾವಣಾ ಪಟ್ಟಿಯಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಸುಮಲತಾ ಅವರ ಹೆಸರು ಇರಲಿದೆ ಎನ್ನಲಾಗಿದೆ.
ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ತಯಾರಿಕೆ ಸಭೆಯಲ್ಲಿ ಸುಮಲತಾ ಹೆಸರು ಕೇಳಿಬಂದಿದೆ. ಮಂಡ್ಯದಿಂದ ಅಂಬರೀಷ್, ಸುಮಲತಾ, ಗಣಿಗ ರವಿಕುಮಾರ್ ಹೆಸರನ್ನು ಹೈಕಮಾಂಡ್ಗೆ ಶಿಫಾರಸು ಮಾಡಲಾಗುವುದು ಎಂದು ಅಂಬರೀಷ್ ಆಪ್ತವಲಯದಿಂದ ಮಾಹಿತಿ ಸಿಕ್ಕಿದ್ದು, ಮಂಡ್ಯದಲ್ಲಿ ಅಂಬರಿಷ್ ಹೊರತು ಪಡಿಸಿದರೆ ಚುನಾವಣಾ ಕಣಕ್ಕೆ ಕಾಂಗ್ರೆಸ್ ಬೇರೆಯವರನ್ನು ಸ್ಪರ್ಧೆ ಮಾಡಲು ಅವಕಾಶ ಮಾಡಿಕೊಡುವುದು ಕಡಿಮೆ. ಅದಲ್ಲದೇ ಸುಮಲತಾ ಅವರಿಗೆ ಅವಕಾಶ ನೀಡಿದರೆ ಮಹಿಳೆಗೆ ಟಿಕೇಟ್ ನೀಡಿದ್ದೀವಿ ಅಂತ ಕಾಂಗ್ರೆಸ್ ಹೇಳಿಕೊಳ್ಳುವುದಕ್ಕೂ ಕೂಡ ಸಹಾಯವಾಗುತ್ತ ಅನ್ನುತ್ತಿದ್ದಾರೆ ರಾಜಕೀಯ ಪಂಡಿತರು.
Comments